ಶನಿವಾರ, ಜುಲೈ 31, 2021
21 °C

ಭಾರಿ ಮಳೆ: ಭಾಲ್ಕಿ, ಹುಣಸಗಿಯಲ್ಲಿ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕದ ವಿವಿಧೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಸಂಜೆ ಮಳೆಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ಹಾಗೂ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಭಾರಿ ಹಾನಿ ಉಂಟಾಗಿದೆ.ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕು ಕೋಸಂ ಗ್ರಾಮದ ಬಹುತೇಕ ಮನೆಗಳ ತಗಡುಗಳು ಭಾನುವಾರ ರಾತ್ರಿ ಗಾಳಿಪಟದಂತೆ ಹಾರಿವೆ. ಗಾಳಿಯ ರಭಸಕ್ಕೆ ಬೃಹತ್ ಗಾತ್ರದ ಮರಗಳು ಮುರಿದು ಬಿದ್ದಿವೆ. 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಕ್ಷಣೆ ಅರಸಿ ಕತ್ತಲೆಯಲ್ಲಿ ಅಲೆಯುತ್ತಿದ್ದ 20 ಜನರಿಗೆ ಹಾರಿದ ತಗಡುಗಳು ಬಡಿದು ಸಣ್ಣ ಪುಟ್ಟ ಗಾಯಗಳಾಗಿವೆ.ಬೀದರ್ ಜಿಲ್ಲೆ ವಿಲಾಸಪುರದಲ್ಲಿ ಮಳೆಯ ಆರ್ಭಟಕ್ಕೆ ಮೂರು ಮನೆಗಳು ಭಾಗಶಃ ಕುಸಿದಿವೆ. ಔರಾದ್, ಬಸವಕಲ್ಯಾಣ, ಹುಮನಾಬಾದ್‌ಗಳಲ್ಲೂ ಮಳೆಯಾಗಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ.ಯಾದಗಿರಿ ಜಿಲ್ಲೆ ಹುಣಸಗಿ, ವಜ್ಜಲ, ಕಲ್ಲದೇವನಹಳ್ಳಿ ಮತ್ತಿತರ ಕಡೆ ಸೋಮವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬೆಳೆದು ನಿಂತ ಭತ್ತದ ಪೈರು ಕೊಚ್ಚಿಕೊಂಡು ಹೋಗಿದ್ದು, ಭಾರಿ ಹಾನಿ ಸಂಭವಿಸಿದೆ.

ಎರಡು ಕಡೆ ಮರ ಮನೆಯ ಮೇಲೆ ಬಿದ್ದು ಹಾನಿ ಸಂಭವಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.