ಭಾರಿ ಮಳೆ: ಮನೆಗಳ ಕುಸಿತ, ಬೆಳೆ ನಷ್ಟ

7

ಭಾರಿ ಮಳೆ: ಮನೆಗಳ ಕುಸಿತ, ಬೆಳೆ ನಷ್ಟ

Published:
Updated:

ದೇವದುರ್ಗ: ಶನಿವಾರ ರಾತಿ್ರ ಸುರಿದ ಭಾರಿ ಮಳೆಯಿಂದಾಗಿ ಪುರಸಭೆಯ ಕೆಲವು ವಾರ್ಡ್‌ಗಳು ಸೇರಿದಂತೆ ತಾಲೂ್ಲಕಿನ ವಿವಿಧ ಗಾ್ರಮ ಪಂಚಾಯಿತಿಗಳ ವಾ್ಯಪಿ್ತಯಲಿ್ಲನ ಗಾ್ರಮಗಳಲಿ್ಲ ಮನೆಗಳ ಕುಸಿತ ಮತು್ತ ಬೆಳೆಗಳು ನಷ್ಟವಾಗಿರುವುದು ವರದಿಯಾಗಿದೆ.ಈ ಬಾರಿಯ ಮುಂಗಾರು ಮಳೆ ಎಡೆಬಿಡದೆ ಸುರಿಯುತಿ್ತರುವುದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆ ಎದುರಾಗಿದೆ. ಮಳೆ ಇಲ್ಲದೆ 2–3ವರ್ಷ ಕಂಗಾಲಾಗಿದ್ದ ರೈತರು ಈ ಬಾರಿ ಮುಂಗಾರು ಆರಂಭದಿಂದಲೇ ಮಳೆ ಉತ್ತಮವಾಗಿರುವುದರಿಂದ ಎಲ್ಲ ಬೆಳೆಗಳು ಚೆನಾ್ನಗಿ ಇದ್ದರೂ ಶನಿವಾರ ಬಿದ್ದ ಭಾರಿ ಮಳೆಯಿಂದಾಗಿ ಕೆಲವು ಕಡೆ ಜಮೀನುಗಳಲ್ಲಿನ ಬೆಳೆಗಳು ಕೊಚಿ್ಚಕೊಂಡು ಹೋಗಿವೆ.ಗಬೂ್ಬರು ಹೋಬಳಿಯ ಬೋಮ್ಮನಾಳ, ಹೇಮನಾಳ ಮತು್ತ ಮಸೀದಾಪುರ ಸೇರಿದಂತೆ ಇತರ ಗಾ್ರಮಗಳಲಿ್ಲ ಬೆಳೆ ನಷ್ಟವಾಗಿರುವ ಬಗೆ್ಗ ತಿಳಿದು ಬಂದಿದು್ದ, ಕೂಡಲೇ ಪರಿಶೀಲಿ­ಸಲಾ­ಗುವುದು ಎಂದು ಗಬೂ್ಬರು ಕಂದಾಯ ನಿರೀಕ್ಷಕ ತಿಮ್ಮಾರೆಡಿ್ಡ ತಿಳಿಸಿದರು.ಗಬೂ್ಬರು ಗಾ್ರಮದಲಿ್ಲ ವಾಸಿಸುತಿ್ತ­ರುವ ಅಲೆಮಾರಿ ಜನಾಂಗದವರ ಗುಡಿಸಿಲುಗಳಲಿ್ಲ ನೀರು ನುಗಿ್ಗದ ಪರಿಣಾಮ ಬಹಳಷು್ಟ ಆಹಾರಧಾನ್ಯ ನಷ್ಟವಾಗಿದೆ. ಶನಿವಾರ ಮಧ್ಯರಾತಿ್ರ ಗುಡಿಸಿಲುಗಳಲಿ್ಲ ನೀರು ನುಗಿ್ಗದ ನಂತರ ದೂರದಲಿ್ಲ ಇದ್ದ ದೇವಸಾ್ಥನ ಮತು್ತ ಶಾಲೆಗಳನು್ನ ಹುಡುಕಿಕೊಂಡು ಹೋಗಿ ನೆಲೆಸಿದಾ್ದರೆ ಎಂದು ದಸಂಸ ಮುಖಂಡ ರಾಮಸಾ್ವಮಿ ತಿಳಿಸಿದರು.ವ್ಯವಸ್ಥೆ: ಗಬ್ಬೂರು ಗಾ್ರಮದಲಿ್ಲ ನೂರಾರು ಸಂಖೆ್ಯಯಲಿ್ಲ ವಾಸಿಸುತಿ್ತ­ರುವ ಅಲೆಮಾರಿ ಜನಾಂಗದವರ ತಾತಾ್ಕಲಿಕವಾಗಿ ವಾಸಿಸುತಿ್ತರುವ ಗುಡಿಸಿಲುಗಳಲಿ್ಲ ನೀರು ನುಗಿ್ಗದ ಕಾರಣ ಆಹಾರ ಧಾನ್ಯ ನಷ್ಟವಾಗಿರುವುದರಿಂದ ಕಂದಾಯ ಇಲಾಖೆಯ ವತಿಯಿಂದ ಊಟಕಾ್ಕಗಿ ಆಹಾರ ಧಾನ್ಯ ನೀಡಲಾ­ಗಿದು್ದ, ಮಳೆಯಿಂದ ನಷ್ಟವಾಗಿರುವ ಬಗೆ್ಗ ತಹಸೀಲಾ್ದರರಿಗೆ ವರದಿ ಸಲಿ್ಲಸಲಾಗಿದೆ ಎಂದು ಕಂದಾಯ ನಿರೀಕ್ಷಕ ತಿಮ್ಮಾರೆಡಿ್ಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry