ಶುಕ್ರವಾರ, ಆಗಸ್ಟ್ 6, 2021
21 °C

ಭಾರಿ ಹಿಮಪಾತ: ನ್ಯೂಯಾರ್ಕ್‌ನಲ್ಲಿ ವಿಮಾನಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಡಿಪಿಎ): ಹಿಮಪಾತದಿಂದಾಗಿ ನ್ಯೂಯಾರ್ಕ್‌ನಲ್ಲಿ ವಿಮಾನಗಳು ತೀವ್ರ ಪರದಾಟಪಟ್ಟಿದ್ದು, 31ಕ್ಕೂ ಅಧಿಕ ಅಂತರರಾಷ್ಟ್ರೀಯ ವಿಮಾನಗಳು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿನ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ವಿಮಾನಗಳು ಕನಿಷ್ಠ 3 ಅಥವಾ ಅದಕ್ಕಿಂತ ಹೆಚ್ಚು ಹೊತ್ತು ಕಾಯಬೇಕಾಯಿತು. ಇಲ್ಲಿನ ಇನ್ನೆರಡು ವಿಮಾನ ನಿಲ್ದಾಣಗಳಲ್ಲೂ ಇದೇ ಸ್ಥಿತಿ ನೆಲೆಸಿತ್ತು. ಹೀಗಾಗಿ ಕ್ರಿಸ್‌ಮಸ್ ರಜಾ ಸಂಭ್ರಮದಲ್ಲಿದ್ದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.ಬ್ಯಾಂಕಾಕ್‌ನಿಂದ ಬಂದ ಕ್ಯಾಥೆ ಪೆಸಿಫಿಕ್ ವಿಮಾನ ತನ್ನ ಪ್ರಯಾಣಿಕರನ್ನು ಇಳಿಸಬೇಕಾದರೆ 12 ಗಂಟೆ ಕಾಯಬೇಕಾಯಿತು. ಇತರ ಹಲವು ವಿಮಾನಗಳ ಪ್ರಯಾಣಿಕರು ಸಹ ಗಂಟೆಕಟ್ಟಲೆ ಕಾಯಬೇಕಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.