ಬುಧವಾರ, ಜೂನ್ 23, 2021
30 °C

ಭಾರ್ತಿ ಆಕ್ಸಾ: ಮಹಿಳೆಗೆ ವಿಶೇಷ ವಿಮೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರ್ತಿ ಆಕ್ಸಾ ಜನರಲ್ ಇನ್ಶುರನ್ಸ್ ಸಂಸ್ಥೆಯು, `ವಿಶ್ವ ಮಹಿಳಾ ದಿನಾಚರಣೆ~ ದಿನದಂದು, ಸ್ವಸಹಾಯ ಗುಂಪಿನ ಮಹಿಳೆಯರಿಗಾಗಿ ವಿಶೇಷ ವಿಮೆ ಯೋಜನೆ ಜಾರಿಗೆ ತಂದಿದೆ.ಗ್ರಾಮೀಣ ಭಾಗದ, ಸೌಲಭ್ಯ ವಂಚಿತ ಮಹಿಳೆಯರಿಗೆ ದುಪ್ಪಟ್ಟು ಅನುಕೂಲ ಮಾಡಿಕೊಡುವ ಹೊಸ ವಿಮೆ ಯೋಜನೆ ಇದಾಗಿದೆ. ಇದೊಂದು `ವ್ಯಕ್ತಿಗತ ಅಪಘಾತದ ಗುಂಪು ಸುರಕ್ಷತೆ ಯೋಜನೆ~ ಮತ್ತು `ಸಮೂಹ ಆರೋಗ್ಯ ವಿಮೆ ಯೋಜನೆ~ಯಾಗಿದೆ.  ಮುಖ್ಯವಾಗಿ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಮರ್‌ನಾಥ್ ಅನಂತನಾರಾಯಣನ್ ಹೇಳಿದ್ದಾರೆ.ಸ್ವಸಹಾಯ ಗುಂಪಿನ ಸದಸ್ಯೆಯರು ಈ ವಿಮೆ ಯೋಜನೆಗೆ  ಒಳಪಟ್ಟಲ್ಲಿ, ಅವರ ಕುಟುಂಬಕ್ಕೆ ಆಧಾರವಾಗಿರುವ  ದುಡಿಯುವ ಇಬ್ಬರು ವ್ಯಕ್ತಿಗಳು ಅನಿರೀಕ್ಷಿತ ಅವಘಡಗಳಗೆ ಒಳಗಾದರೆ ಈ ವಿಮೆ ಯೋಜನೆಯು ಮಹಿಳೆ ಸೇರಿದಂತೆ ಇಡೀ ಕುಟುಂಬದ ನೆರವಿಗೆ ಬರಲಿದೆ.

ಒಂದು ವರ್ಷಕ್ಕೆ ್ಙ 365  ಪಾವತಿಸಿದರೆ ಗರಿಷ್ಠ  ರೂ 2.20 ಲಕ್ಷದವರೆಗೆ ಪರಿಹಾರ ದೊರೆಯುವ ಸೌಲಭ್ಯ ಈ ಯೋಜನೆಯಲ್ಲಿ ಲಭ್ಯ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.