ಮಂಗಳವಾರ, ಏಪ್ರಿಲ್ 20, 2021
30 °C

ಭಾಲ್ಕಿ-ಹುಮನಾಬಾದ್ ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಪ್ರತಿ ಟನ್ ಕಬ್ಬಿನ ಬೆಲೆಯನ್ನು ರೂ. 3ಸಾವಿರಕ್ಕೆ ಹೆಚ್ಚಿಸುವುದು ಮೊದಲಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲ್ಲೂಕಿನ ದುಬಲಗುಂಡಿ ಗ್ರಾಮದ ಹುಮನಾಬಾದ್- ಭಾಲ್ಕಿ ಮಾರ್ಗಮಧ್ಯೆ ಮಂಗಳವಾರ ಮಧ್ಯಾಹ್ನ ರಸ್ತೆತಡೆ ಪ್ರತಿಭಟನೆ ನಡೆಸಿದರು.ಈ ವಿಷಯದಲ್ಲಿ ಜಿಲ್ಲೆಯ ಮೂರು ಸಹಕಾರ ಸಕ್ಕರೆ ಕಾರ್ಖಾನೆಗಳು ಶೀಘ್ರದಲ್ಲಿ ರೂ. 3ಸಾವಿರ ಬೆಲೆ ನಿಗದಿ ಕುರಿತು ಘೋಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಸಿದರು. ರೈತ ಸಂಘದ ಮುಖಂಡ ಶಾಂತಪ್ಪ ಪಸರಾಗಿ ದುಬಲಗುಂಡಿ, ಶಂಕರ ಗಂಗಾ ಪಾಟೀಲ, ಮಲ್ಲಿಕಾರ್ಜುನ ಕಾಶಪ್ಪನೋರ್, ರಮೇಶ ಹೋಗ್ತಾಪೂರೆ, ಬಸವರಾಜ ವೀರಶೆಟ್ಟಿ, ಅಶೋಕ ಚಳಕಾಪೂರೆ, ಮಾಲಿ ಪಾಟೀಲ ಶರಣಪ್ಪ, ರೇವಣಪ್ಪ ಲಕಶೆಟ್ಟಿ, ಗಿರೀಶ ಆಚಾರ್ಯ, ಸಂಗಪ್ಪ ಧತ್ತರಗಿ, ರಾಜಪ್ಪ ಗಂಗಶೆಟ್ಟಿ, ಶಿವರಾಜಗಂಗಶೆಟ್ಟಿ, ಯಶವಂತ ಶಿರಶೆಟ್ಟಿ, ವಿಜಯಕುಮಾರ ಚಿಂಚೋಳಿಕರ್, ರಾಜಶೇಖರ ಶಿರಶೆಟ್ಟಿ, ಮಲ್ಲಿಕಾರ್ಜುನ ಚೀಲಾ, ಕೇಶವರಾವ ಕುಲಕರ್ಣಿ, ರಾಯಪ್ಪ ಫತ್ತೆಪೂರ, ವಿಜಯಕುಮಾರ ನಾತೆ, ಸೂರ್ಯಕಾಂತ ಹೋಗ್ತಾಪೂರೆ, ಮಲ್ಲಪ್ಪ ಮುಸ್ತರಿ, ಅಶೋಕ ಕನಸಾಳೆ ಮೊದಲಾದವರು ರಸ್ತೆತಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಸ್ತೆತಡೆ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈ ಸಂಬಂಧ ಭಾಲ್ಕಿ- ಹುಮನಾಬಾದ್ ಮಾರ್ಗದ ಎರಡು ಬದಿಗೆ ನೂರಾರು ವಾಹನ ಸಾಲುಗಟ್ಟಿ ನಿಂತಿರುವುದು ಕಂಡುಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.