ಭಾವದ ಬೆಡಗು, ರೇಖಾ ವಿನ್ಯಾಸ

7

ಭಾವದ ಬೆಡಗು, ರೇಖಾ ವಿನ್ಯಾಸ

Published:
Updated:

ಹೂಬುಟ್ಟಿ ಇಟ್ಟು ದೇವಾಲಯದ ಬಾಗಿಲಲ್ಲಿ ಕಾಯುತ್ತಿರುವ ಮಹಿಳೆ, ಕೋಲು ಹಿಡಿದು ದನ ಕಾಯುತ್ತ ಕುಳಿತಿರುವ ಗ್ರಾಮೀಣ ಮಹಿಳೆ, ಹೆರಳು ಕಟ್ಟುತ್ತಿರುವ ಮಹಿಳೆ... ದಟ್ಟ ಬಣ್ಣಗಳಲ್ಲಿ ಮೂಡಿಬಂದ ಭಾವಗಳ ಬೆಡಗು. ಮತ್ತೊಂದಿಷ್ಟು ಕಲಾಕೃತಿಗಳಲ್ಲಿ ರೇಖೆಗಳ ವಿನ್ಯಾಸ. ಗಾಢ ವರ್ಣದ ಹಿನ್ನೆಲೆಯಲ್ಲಿ ಎದ್ದು ಕಾಣುವ ಬಿಳಿಯ ರೇಖಾಚಿತ್ರಗಳು ಕಲಾಪ್ರೇಮಿಗಳ  ಕಣ್ಣು ತಣಿಸುವಂತಿವೆ.ಧಾರವಾಡದ ಭಾರತೀಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿರುವ  ನಿಂಗಪ್ಪ ಆರ್. ನಾಯ್ಕರ್ ಅವರ ಈ ಕಲಾಕೃತಿಗಳಲ್ಲಿ ಥಟ್ಟನೆ ಗಮನ ಸೆಳೆಯುವುದು ವರ್ಣ ಸಂಯೋಜನೆ. ಹಲವು ಏಕವ್ಯಕ್ತಿ, ಸಮೂಹ ಕಲಾಪ್ರದರ್ಶನ ನೀಡಿರುವ ನಾಯ್ಕರ್ ಈಗ ಬುಡಕಟ್ಟು ಜನರ ಜೀವನ ಅಧ್ಯಯನ  ಮಾಡುತ್ತಿದ್ದಾರೆ. ಅದನ್ನು  ಕ್ಯಾನ್ವಾಸ್ ಮೇಲೆ ಬಿಂಬಿಸುವ ಯೋಜನೆ ಹೊಂದಿದ್ದಾರೆ.ಈ ಪ್ರದರ್ಶನ  ಶುಕ್ರವಾರದವರೆಗೆ ನಡೆಯಲಿದೆ. ಸ್ಥಳ: ಚಿತ್ರಕಲಾ ಪರಿಷತ್ತು. ಬೆಳಿಗ್ಗೆ 10ರಿಂದ 7.

g

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry