ಮಂಗಳವಾರ, ಮಾರ್ಚ್ 2, 2021
31 °C

ಭಾವುಕರಾದ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾವುಕರಾದ ಮೋದಿ

ಸಾರಂಗಪುರ (ಪಿಟಿಐ): ಸ್ವಾಮಿ ನಾರಾಯಣ ಪಂಥದ ಧಾರ್ಮಿಕ ಮುಖ್ಯಸ್ಥ ಪ್ರಮುಖ ಸ್ವಾಮಿ ಅವರ ಪಾರ್ಥಿವ ಶರೀರಕ್ಕೆ ಸೋಮವಾರ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ‘ನಾನು ಪಿತೃಸಮಾನ ವ್ಯಕ್ತಿಯನ್ನು ಕಳೆದುಕೊಂಡಿದ್ದೇನೆ’ ಎಂದು ಭಾವುಕರಾಗಿ ಹೇಳಿದರು.ಒತ್ತರಿಸಿ ಬರುತ್ತಿದ್ದ ಭಾವನೆಗಳನ್ನು ಅದುಮಿಟ್ಟುಕೊಂಡು ಪ್ರಧಾನಿ ಮೋದಿ ಅವರು 20 ನಿಮಿಷ ಮಾತನಾಡಿದರು. ಪ್ರಮುಖ್ ಸ್ವಾಮಿ ಅವರನ್ನು ಮೋದಿ ತಮ್ಮ ತಂದೆಗೆ ಹೋಲಿಸಿದರು. ಪ್ರಮುಖ್ ಸ್ವಾಮಿ ಶನಿವಾರ ಕೊನೆ ಯುಸಿರೆಳೆದಿದ್ದಾರೆ. ‘ನಿಮ್ಮಲ್ಲಿ ಅನೇಕರು ಗುರುವನ್ನು ಕಳೆದುಕೊಂಡಿರಬಹುದು. ಆದರೆ ನಾನು ತಂದೆಯನ್ನೇ ಕಳೆದುಕೊಂಡಿದ್ದೇನೆ’ ಎಂದು ಮೋದಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.