ಸೋಮವಾರ, ಜೂನ್ 14, 2021
25 °C

ಭಾಷಾಭಿಮಾನದ ಕೊರತೆ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇಂದಿನ ಯುವಜನಾಂಗ­ದಲ್ಲಿ ಭಾಷೆಯ ಕುರಿತು ಅರಿವು ಹಾಗೂ ಸ್ವಾಭಿಮಾನವಿಲ್ಲ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜ­ಗೆರೆ ಜಯಪ್ರಕಾಶ್‌ ವಿಷಾದ ವ್ಯಕ್ತ­ಪಡಿಸಿದರು. ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇ­ಜಿನ ಆವರಣದಲ್ಲಿ ಬುಧವಾರ ನಡೆದ ‘ನುಡಿ ಹಬ್ಬ’ ಕಾರ್ಯಕ್ರಮದಲ್ಲಿ ಭಾಗ­ವಹಿಸಿ ಅವರು ಮಾತನಾಡಿದರು.‘ಯುವಕರು ಅನುಕರಣೆಯಿಂದಲೇ ತಾವು ದೊಡ್ಡವರಾಗಲು ಸಾಧ್ಯವೆಂದು ಭಾವಿಸಿದ್ದಾರೆ’ ಎಂದು ಹೇಳಿದರು.

‘ಯಾವ ಜನಾಂಗ ಭಾಷೆಯನ್ನು ಕಳೆದುಕೊಳ್ಳುತ್ತ ಹೋಗುತ್ತದೆಯೋ ಆ ಜನಾಂಗ ತನ್ನ ಅಸ್ಮಿತೆಯನ್ನೂ ಕಳೆದು­ಕೊಳ್ಳುತ್ತ ಸಾಗುತ್ತದೆ’ ಎಂದರು.

‘ಕನ್ನಡ ಭಾಷೆಯನ್ನು ಕಟ್ಟಲು ಸಾಹಿತಿ ಮತ್ತು ಕವಿಗಳಿಂದ ಮಾತ್ರ ಸಾಧ್ಯ­ವಿಲ್ಲ. ಭಾಷೆಯನ್ನು ಇಂದಿನ ತಂತ್ರ­ಜ್ಞಾನಕ್ಕೆ ಅನುಗುಣವಾಗಿ ಬೆಳೆಸಬೇಕು. ಉದ್ಯಮ­ವನ್ನು ಸೃಷ್ಟಿಸಬೇಕು. ಆಗ ಕನ್ನಡ ಭಾಷೆಯು ಇಂಗ್ಲಿಷ್ ಭಾಷೆ­ಯೊಂದಿಗೆ ಸ್ಪರ್ಧಿಸಲು ಸಾಧ್ಯ­ವಾಗು­ತ್ತದೆ’ ಎಂದು ಹೇಳಿದರು.‘ಕನ್ನಡವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡು­ತ್ತಿರುವ ಪೋಷಕರು ಇಂಗ್ಲಿಷ್‌ ಭಾಷೆ­ಯಿಂದಲೇ ಎಲ್ಲವನ್ನು ಪಡೆ­ಯಲು ಸಾಧ್ಯವೆಂದು ತಿಳಿದಿದ್ದಾರೆ. ಆದರೆ, ನಮ್ಮ ಭಾಷೆಯ ಅಸ್ಮಿತೆಯನ್ನು ತೊಡೆದು ಹಾಕಿ ಬೇರೆ ಭಾಷೆಗೆ ಜೋತು ಬೀಳುವುದು ಎಷ್ಟು ಸರಿ ಎಂಬು­ದರ ಕುರಿತು ಯೋಚಿಸಬೇಕು’ ಎಂದರು.‘ಬೇರೆ ಭಾಷೆಯ ಅನುಕರಣೆಯಿಂದ ನಾವು ಅಭಿವೃದ್ಧಿ ಹೊಂದಲು ಸಾಧ್ಯ­ವಿಲ್ಲ. ನಾವು ಎಷ್ಟೇ ಇಂಗ್ಲಿಷ್‌ ಭಾಷೆ ಮಾತ­ನಾಡಿದರೂ ನಮ್ಮನ್ನು ಅವರು ದ್ವಿತೀಯ ದರ್ಜೆಯ ಪ್ರಜೆ­ಗ­ಳೆಂದೇ ಗುರುತಿಸುತ್ತಾರೆ’ ಎಂದು ಹೇಳಿದರು. ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅನೇಕ ಜನಪದ ಗೀತೆಗಳನ್ನು ಹಾಡಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.