`ಭಾಷಾ ಮಾಧ್ಯಮದಲ್ಲಿ ಸಂಸ್ಕಾರಯುಕ್ತ ಸಂವಹನ'

ಶನಿವಾರ, ಜೂಲೈ 20, 2019
22 °C

`ಭಾಷಾ ಮಾಧ್ಯಮದಲ್ಲಿ ಸಂಸ್ಕಾರಯುಕ್ತ ಸಂವಹನ'

Published:
Updated:

ಉಡುಪಿ: `ಪ್ರತಿಯೊಂದು ಭಾಷಾ ಮಾಧ್ಯಮದಲ್ಲಿಯೂ ಸಂಸ್ಕಾರಯುಕ್ತ ಸಂವಹನ ಸಾಧ್ಯವಿದೆ. ಇಂದಿನ ಸ್ಪರ್ಧಾ ತ್ಮಕ ಜಗತ್ತಿನಲ್ಲಿ ಸ್ವಂತ ನೆಲೆಯನ್ನು ಕಾಣ ಬೇಕಾದರೆ ಇಂಗ್ಲಿಷ್ ಅವಶ್ಯಕ'ಎಂದು ವೆಸ್ಟರ್ನ್  ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಉಡುಪಿ ಕೇಂದ್ರದ ಮುಖ್ಯಸ್ಥ ಪ್ರೊ.ಜೈಕಿಶನ್ ಭಟ್ ಹೇಳಿದರು.ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವೃತ್ತಿ ಮಾರ್ಗದರ್ಶನ ಸಂಘದಿಂದ ಇತ್ತೀಚೆಗೆ ನಡೆದ ಆಂಗ್ಲಭಾಷಾ ಸಂವಹನ ಕೌಶಲ್ಯ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ವಿದ್ಯಾರ್ಥಿಗಳ ಜೊತೆ ನೇರ ಸಂವಹನ ನಡೆಸಿ ತಪ್ಪುಗಳನ್ನು ತಿದ್ದಿ ಹೇಳುವ ಮೂಲಕ ಹಾಗೂ ವ್ಯವಹಾರದಲ್ಲಿ ಆಗುವ ತಪ್ಪುಗಳನ್ನು ತಿದ್ದಿಕೊಂಡಾಗ ಸ್ಪಚ್ಛ ಸಂವಹನ ಸಾಧ್ಯವಾಗುತ್ತದೆ ಎಂದರು.ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ ಭಟ್ ಉಪಸ್ಥಿತರಿದ್ದರು. ವೃತ್ತಿ ಮಾರ್ಗದರ್ಶನ ವಿಭಾಗದ ಅಧ್ಯಾ ಪಕ ಸಲಹೆಗಾರ ಉಪನ್ಯಾಸಕ ಜಾವೆದ್ ಸ್ವಾಗತಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ  ರಾಧಾಕೃಷ್ಣ ರಾವ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry