ಭಾಷಾ ವಿರೋಧಿ ನೀತಿಗೆ ಖಂಡನೆ

7
ತಾಳವಾಡಿಯಲ್ಲಿ ಕನ್ನಡಿಗರ ಬೃಹತ್ ಪ್ರತಿಭಟನೆ

ಭಾಷಾ ವಿರೋಧಿ ನೀತಿಗೆ ಖಂಡನೆ

Published:
Updated:
ಭಾಷಾ ವಿರೋಧಿ ನೀತಿಗೆ ಖಂಡನೆ

ಚಾಮರಾಜನಗರ: ಕನ್ನಡ ಮತ್ತು ಉರ್ದು ಭಾಷೆಗಳಿಗೆ ಕಂಟಕ ತರುವಂತಹ ನೀತಿ ರೂಪಿಸಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಜಿಲ್ಲೆಯ ಗಡಿಗೆ ಅಂಟಿಕೊಂಡಿರುವ ತಾಳವಾಡಿಯಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.ತಾಳವಾಡಿ ಫಿರ್ಕಾದಲ್ಲಿ 28 ಕನ್ನಡ ಮಾಧ್ಯಮ ಶಾಲೆ, 9 ಮಾಧ್ಯಮಿಕ ಶಾಲೆ, 3 ಪ್ರೌಢಶಾಲೆ ಹಾಗೂ 2 ಪದವಿಪೂರ್ವ ಕಾಲೇಜುಗಳಿದ್ದು, ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಕನ್ನಡ ಸಂಘದ ನೇತೃತ್ವದಡಿ ನಡೆದ ಪ್ರತಿಭಟನಾ ಮೆರವಣಿಗೆ ನೇತಾಜಿ ವೃತ್ತದಿಂದ ಆರಂಭಗೊಂಡಿತು. ಶಿಕ್ಷಣಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿದರು.ಈ ಮೊದಲು ಪ್ರಥಮ ಭಾಷೆ ಕನ್ನಡಕ್ಕೆ ಶೇ. 100 ಅಂಕ ನಿಗದಿಪಡಿಸಲಾಗಿತ್ತು. ಪ್ರಸ್ತುತ 50 ಅಂಕಕ್ಕೆ ಕಡಿತಗೊಳಿಸಲಾಗಿದೆ. ಉಳಿದ ಅಂಕಕ್ಕೆ ಪ್ರಥಮ ಭಾಷೆಯಾಗಿ ತಮಿಳು ಕಲಿಯಲು ಆದೇಶಿಸಲಾಗಿದೆ. ಕನ್ನಡ ಶಾಲೆಗಳಿಗೆ ತಮಿಳು ಭಾಷಾ ಶಿಕ್ಷಕರನ್ನು ನೇಮಿಸಲಾಗಿದೆ. ಕೂಡಲೇ, ಈ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಪ್ರಥಮ ಭಾಷೆಯಾಗಿ ಉರ್ದು ಓದುವ ಮಕ್ಕಳು ಕೂಡ ಸರ್ಕಾರದ ನೀತಿಯಿಂದ ತೊಂದರೆ ಅನುಭವಿಸುವಂತಾಗಿದೆ.

ಬಲವಂತವಾಗಿ ತಮಿಳು ಕಲಿಯಲು ಒತ್ತಡ ಹೇರಲಾಗುತ್ತಿದೆ. ಅಂಕ ಕಡಿತಗೊಳಿಸಿರುವ ಪರಿಣಾಮ ಭವಿಷ್ಯದಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ತೊಂದರೆಗೆ ಸಿಲುಕಲಿದ್ದಾರೆ. ಈ ಹಿನ್ನೆಲೆಯಲ್ಲಿ ಆದೇಶವನ್ನು ಹಿಂದಕ್ಕೆ ಪಡೆದು ಕನ್ನಡ, ಉರ್ದು ಭಾಷೆ ಉಳಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry