ಭಾಷಾ ಸಮಸ್ಯೆ!

7

ಭಾಷಾ ಸಮಸ್ಯೆ!

Published:
Updated:

ಕಾವೇರಿ ಕಾವಿನಲ್ಲಿ `ಭಾಷಾ ಸಮಸ್ಯೆ~ಯೆ? ಹೌದು! ಕಾವೇರಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಬಂದ ಕೇಂದ್ರ ತಂಡದ ಮುಂದೆ ಪರಿಸ್ಥಿತಿ  ವಿವರಿಸಲು ನಮ್ಮ ಅಧಿಕಾರಿಗಳು ಭಾಷಾ ಸಮಸ್ಯೆಯಿಂದಾಗಿ ತಡವರಿಸಿದರಂತೆ!

(ಪ್ರ. ಅ. 6) ತಂಡ ಮಾಹಿತಿ ಕೇಳಿದ್ದು ತಮಿಳಿನಲ್ಲಲ್ಲ. ಇಂಗ್ಲಿಷಿನಲ್ಲಿ. ಆದರೂ ಅಧಿಕಾರಿಗಳಿಗೆ ಕಷ್ಟವಾಯಿತು! ಆಯಿತಲ್ಲ ನಮ್ಮ  ಇಂಗ್ಲಿಷಿಗೆ `ಮಂಗಳಾರತಿ~!

ಯಾಕೆ ನಮಗೆ ಇಂಗ್ಲಿಷ್ ವ್ಯಾಮೋಹ? ಕುವೆಂಪು ಪ್ರವಾದಿಯಾಗಿ ಹಿಂದೆಯೆ ಹೇಳಿದರು:

`ನಮ್ಮ ದೇಶದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಖಾನೆ, ಅಣೆಕಟ್ಟುಗಳ ಕೆಲಸಗಳನ್ನು ನಿಲ್ಲಿಸಿ, ಅದರಿಂದ ಉಳಿತಾಯವಾಗುವ ಸಂಪತ್ತನ್ನೂ ಇಂಗ್ಲಿಷ್ ವಿದ್ಯಾಭ್ಯಾಸದ ಮಟ್ಟವನ್ನು ಏರಿಸಲು ವಿನಿಯೋಗಿಸಿದರೂ,

ಇನ್ನೂ ಕೋಟ್ಯಂತರ ರೂಪಾಯಿ ಸುರಿದರೂ, ಇನ್ನೂ ನೂರು ವರ್ಷ ಕಾಲ ಸತತವಾಗಿ ದುಡಿದರೂ ಇಂಗ್ಲಿಷ್ ಭಾಷಾಜ್ಞಾನ ನಮ್ಮ ವಿದ್ಯಾರ್ಥಿಗಳಲ್ಲಿ ಈಗಿರುವುದಕ್ಕಿಂತಲೂ ಹೆಚ್ಚೇನೂ ಉತ್ತಮವಾಗುವುದಿಲ್ಲವೆಂದು ಖಚಿತವಾಗಿ ಹೇಳುತ್ತೇನೆ~.  ಎಲ್ಲರಿಗೂ ಅನ್ವಯಿಸತಕ್ಕದ್ದು ಈ ಮಾತು! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry