ಭಾಷೆಯ ಶುದ್ಧತೆಗೆ ಸಂಸ್ಕೃತ ಜ್ಞಾನ ಅವಶ್ಯ

7

ಭಾಷೆಯ ಶುದ್ಧತೆಗೆ ಸಂಸ್ಕೃತ ಜ್ಞಾನ ಅವಶ್ಯ

Published:
Updated:
ಭಾಷೆಯ ಶುದ್ಧತೆಗೆ ಸಂಸ್ಕೃತ ಜ್ಞಾನ ಅವಶ್ಯ

ಮೈಸೂರು:  ಡಾ.ಎಸ್.ಎಲ್.ಭೈರಪ್ಪನವರಿಗೆ ಬುಧವಾರ ಅವರ ನಿವಾಸದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವವನ್ನು ಪ್ರದಾನ ಮಾಡಲಾಯಿತು.ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ನಿವಾಸದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎ.ಮುರಿಗೆಪ್ಪ ಅವರು ಭೈರಪ್ಪನವರಿಗೆ ನಾಡೋಜ ಪದವಿ ಪ್ರಮಾಣಪತ್ರ, ಸರಸ್ವತಿ ಮೂರ್ತಿಯನ್ನು ನೀಡಿದರು.ಗೌರವ ಸ್ವೀಕರಿಸಿದ ನಂತರ ಭೈರಪ್ಪ ನಂತರ ಸುದ್ದಿಗಾರರೊಂದಿಗೆ ಮಾತನಾಡಿ `ಪಠ್ಯದಲ್ಲಿ ಸಂಸ್ಕೃತ ಕಡ್ಡಾಯವಾಗಬೇಕು ಎಂದು ಹೇಳಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ. ಇಂದಿನ ಬರಹಗಾರರು ಮತ್ತು ವಿದ್ಯಾರ್ಥಿಗಳಿಗೆ ಭಾಷೆಯ ಶುದ್ಧತೆ ಗೊತ್ತಾಗಬೇಕಾದರೆ ಸಂಸ್ಕೃತ ಜ್ಞಾನ ಇರಬೇಕು. ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎಂ.ಸಿ. ಚಾಗ್ಲಾ ಅವರು ವಿದ್ವಾಂಸರಾಗಿದ್ದರು.ಮುಸ್ಲಿಂ ಸಮುದಾಯದ ವ್ಯಕ್ತಿಯಾಗಿದ್ದರೂ ಕೂಡ ಅವರು ಸಂಸ್ಕೃತ ಭಾಷೆ ಕಲಿಕೆ ಪ್ರೌಢಶಾಲೆ ಹಂತದಲ್ಲಿ ಇರಬೇಕು ಎಂದು ಶಿಫಾರಸು ಮಾಡಿದ್ದರು. ಸಂಸ್ಕೃತ ಕಲಿಕೆಯ ಬಗ್ಗೆ ದ್ರಾವಿಡ, ಆರ‌್ಯ ಮತ್ತಿತರ ವಿಷಯಗಳನ್ನು ತರುವುದರಲ್ಲಿ ಅರ್ಥವಿಲ್ಲ. ಮಲಯಾಳಂ ಭಾಷೆಯಲ್ಲಿಯೂ ಸಂಸ್ಕೃತ ಶಬ್ದಗಳಿವೆ~ ಎಂದು ಹೇಳಿದರು.`ಇಂದಿನ ಕೆಲವು ಪತ್ರಕರ್ತರು, ಕನ್ನಡ ಬರಹಗಾರರಿಗೆ ಮೂಲರೂಪದ ಭಾಷಾ ಜ್ಞಾನದ ಅವಶ್ಯಕತೆ ಇದೆ.  ಅದಕ್ಕಾಗಿಯೇ ಸಂಸ್ಕೃತದ ಜ್ಞಾನ ಅಗತ್ಯವಾಗುತ್ತದೆ. ಮೂಲ ಮತ್ತು ನವೋದಯ ಕಾಲದ ಸಾಹಿತಿಗಳಿಗೆ ಸಂಸ್ಕೃತದ ಅರಿವು ಇತ್ತು. ಕುವೆಂಪು, ಬೇಂದ್ರೆ ಅಂತಹ ಸಾಹಿತಿಗಳೂ ಸಂಸ್ಕೃತದ ಅಧ್ಯಯನ ಮಾಡಿದ್ದರು~ ಎಂದು ನೆನಪಿಸಿದರು.`ಹಂಪಿ ವಿವಿ ಘಟಿಕೋತ್ಸವಕ್ಕೆ ಹೋಗಬೇಕಿತ್ತು. ಆದರೆ ಹುಟ್ಟೂರಿನಲ್ಲಿ ಕಾರ್ಯಕ್ರಮ ಇದ್ದ ಕಾರಣ ಹೋಗಲು ಆಗಿರಲಿಲ್ಲ. ಈಗ ಇಲ್ಲಿಯವರೆಗೆ ಬಂದು ಪುರಸ್ಕರಿಸಿರುವುದು ಸಂತಸ ತಂದಿದೆ~ ಎಂದು ತಿಳಿಸಿದರು. ಹಂಪಿ ವಿವಿ ಕುಲಸಚಿವ ಮಂಜುನಾಥ ಬೇವಿನಕಟ್ಟಿ, ನಿರ್ದೇಶಕ ಡಾ. ಎಫ್.ಬಿ. ಹಳ್ಳಿಕೇರಿ, ಹಣಕಾಸು ಅಧಿಕಾರಿ ಗುರುಲಿಂಗಪ್ಪ ಹೊಸಮನಿ, ಡಾ. ಬಿ. ವಸಂತಕುಮಾರ್, ಡಾ. ಹಂಪಣ್ಣ ಮತ್ತಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry