ಭಾನುವಾರ, ಜೂನ್ 20, 2021
26 °C

ಭಾಷೆ, ಗಡಿ ಮೀರುವ ಶಕ್ತಿ ಕಲೆಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: `ನೃತ್ಯ ಮುಂತಾದ ಕಲಾ ಸ್ಪರ್ಧೆಗಳಿಗೆ ರೋಟರಿಯಂಥ  ಸಂಸ್ಥೆಗಳು ಪ್ರೋತ್ಸಾಹ ನೀಡುವುದು ಉತ್ತಮ ಬೆಳಣಿಗೆ~ ಎಂದು ಕನ್ನಡ ನಟಿ ಹರ್ಷಿತಾ ಪೂಣಚ ತಿಳಿಸಿದರು.ಕುಮಟಾದಲ್ಲಿ ಭಾನುವಾರ  ರೋಟರ‌್ಯಾಕ್ಟ್ ಪ್ರಾಯೋಜಿತ ರಾಜ್ಯ ಮಟ್ಟದ  `ವೂಗಿ-ಬೂಗಿ~ ಮೊದಲ ಸುತ್ತಿನ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ` ಹಿಂದೆ ಸಿನಿಮಾ ಚಿತ್ರೀಕರಣಕ್ಕೆಂದು ಕುಮಟಾಕ್ಕೆ ಬಂದಿದ್ದೆ.ಆದರೆ ಇಂಥ ನೃತ್ಯ ಕಾರ್ಯ ಕ್ರಮಕ್ಕೆ ಬರುವ ಕಲ್ಪನೆ ಕೂಡ ಇರಲಿಲ್ಲ. ಈ ಸ್ಪರ್ಧೆಯಲ್ಲಿ ಯಾರು ಉತ್ತಮ ನೃತ್ಯ ಪ್ರದರ್ಶನ ನೀಡು ತ್ತಾರೋ ಅವರ ಜೊತೆ ಒಂದೆರಡು ನಿಮಿಷ ವೇದಿಕೆಯಲ್ಲಿ ನಾನೂ ಹೆಜ್ಜೆ ಹಾಕುತ್ತೇನೆ~ ಎಂದು ತಮ್ಮ ಅಭಿನಯದ ಗೀತೆಯೊಂದನ್ನು ಹಾಡಿ ರಂಜಿಸಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಸಿದ್ಧ ದಂತ ವೈದ್ಯ ಡಾ. ಡಿ ಡಿ ನಾಯಕ, ` ನಮ್ಮ ಅಸೂಯೆ, ಸಿಟ್ಟು, ದ್ವೇಷವನ್ನೆಲ್ಲ ಮರೆಸುವ ಮಾದುರ್ಯತೆ ಸಂಗೀತ, ನೃತ್ಯದಂತಹ ಕಲಾ ಪ್ರಕಾರಗಳಿಗಿದೆ. ಅವುಗಳಿಗೆ ಭಾಷೆ, ಗಡಿ ಮೀರಿ ಸಂವಹನ ನಡೆಸುವ ಶಕ್ತಿಯಿದೆ~ ಎಂದರು.ರೋಟರಿ ಅಸಿಸ್ಟೆಂಟ್ ಗವರ‌್ನರ್ ಎಂ.ಬಿ. ಪೈ, ` ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ರೋಟಕರ‌್ಯಾಕ್ಟ್ ಸಂಸ್ಥೆ ಎಳೆಯ ಪ್ರತಿಭೆಗಳಿಗೆ ಅವಕಾಶ ನೀಡುವಂಥ ` ವೂಗಿ-ಬೂಗಿ~ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ~ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷೆ ನೀರಜಾ ನಾಯಕ ಮಾತನಾಡಿದರು. ರೋಟರ‌್ಯಾಕ್ಟ್ ಅಧ್ಯಕ್ಷ ಯೋಗೇಶ ಕಾಮತ್ ಸ್ವಗತಿಸಿದರು. ರೋಟರಿ ಅಧ್ಯಕ್ಷ ಸತೀಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕಾರ್ಯದರ್ಶಿ ಸುರೇಶ ಭಟ್ಟ, ಲಯನ್ಸ್ ಕ್ಲಬ್ ಪದಾಧಿಕಾರಿ ರೇವತಿ ಪ್ರಮೋದ್ ರಾವ್, ರೋಟರ‌್ಯಾಕ್ಟ್ ಪದಾಧಿಕಾರಿಗಳಾದ ಗಣಪತಿ ಶೆಟ್ಟಿ, ಚೇತನ ಶೇಟ್, ರವಿರಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬೆನಕ ಗೌಡ, ಸಂಜಯ ಪಟಗಾರ  ಮೊದಲಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.