ಸೋಮವಾರ, ಮೇ 23, 2022
30 °C

ಭಿನ್ನಮತಕ್ಕೆ ಕೊನೆ ಇಲ್ಲವೇ ?

ನಾ ದಿವಾಕರ, ಮೈಸೂರು. Updated:

ಅಕ್ಷರ ಗಾತ್ರ : | |

ಕರ್ನಾಟಕದ ರಾಜಕೀಯಕ್ಕೆ ಏನಾಗಿದೆ. ಮೌಲ್ಯಾಧಾರಿತ ರಾಜಕಾರಣ ಎಂಬ ಪದವನ್ನು ಹುಟ್ಟುಹಾಕಿದ ರಾಜ್ಯದಲ್ಲಿ ಇಂದು ಭ್ರಷ್ಟಾಧಾರಿತ ರಾಜಕಾರಣ ನೆಲೆಗಾಣುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಬದಲು ವಿಶ್ವ ಭ್ರಷ್ಟ ಸಮ್ಮೇಳನವನ್ನು ನಡೆಸುವುದೇ ಸೂಕ್ತವಾಗಿತ್ತು ಎನಿಸುತ್ತದೆ. ವಿರೋಧ ಪಕ್ಷಗಳ ನಾಯಕರು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನತೆಯ ಸಮಸ್ಯೆಗಳನ್ನು ಆಲಿಸುವುದಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿಗಳ ಭ್ರಷ್ಟಾಚಾರವನ್ನು ತನಿಖೆ ಮಾಡುವ ಖಾಸಗಿ ಸಿಬಿಐ ಸಂಸ್ಥೆಗಳಂತಾಗಿಬಿಟ್ಟಿದ್ದಾರೆ.ಭೂ ಹಗರಣ, ಡಿ ನೋಟಿಫಿಕೇಷನ್, ಸ್ಜಜನಪಕ್ಷಪಾತ, ಕುಟುಂಬ ರಾಜಕಾರಣ, ಅಧಿಕಾರದ ಔದ್ಯಮೀಕರಣ, ಮಠೋದ್ಯಮಿಗಳ ಧನಾನ್ವೇಷಣೆ ಮತ್ತು ಹಣದ ಥೈಲಿಗಳ ಮಠಾನ್ವೇಷಣೆ ಇವೆಲ್ಲವೂ ರಾಜ್ಯ ರಾಜಕೀಯದಲ್ಲಿ ಉದಯಿಸಿರುವ ಹೊಸ ವಿದ್ಯಮಾನಗಳು. ಪ್ರಸಕ್ತ ಸರ್ಕಾರದ ವಿರುದ್ಧ ಆರಂಭದಿಂದಲೂ ಭಿನ್ನಮತವನ್ನೇ ವ್ಯಕ್ತಪಡಿಸುತ್ತಿರುವ ಪ್ರಜೆಗಳ ಅಭಿಪ್ರಾಯ ಕೇಳುವವರೇ ಇಲ್ಲ. ಜನತೆಯ ಹತಾಶೆಯೆಲ್ಲವೂ ಸಮ್ಮೇಳನಗಳಲ್ಲಿ ಕರಗಿ ಹೋಗುತ್ತಿದೆ. ರಾಜಕಾರಣಿಗಳು ಪರಸ್ಪರ ಅವತಾರಗಳನ್ನು ಬಿಚ್ಚಿಡುತ್ತಲೇ ಇದ್ದಾರೆ. ಏತನ್ಮಧ್ಯೆ ಕರ್ನಾಟಕದ ರಾಜಕಾರಣ ನಗ್ನವಾಗುತ್ತಲೇ ಇದೆ.  

 

 

 

 


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.