ಮಂಗಳವಾರ, ಅಕ್ಟೋಬರ್ 15, 2019
28 °C

ಭಿನ್ನಮತ ಇಲ್ಲ: ಸಚಿವ ಕಾಗೇರಿ ಸ್ಪಷ್ಟನೆ

Published:
Updated:

ಶಿರಸಿ: ಪಕ್ಷದ ಆಂತರಿಕ ವಿಚಾರ ಪಕ್ಷದ ಮುಖಂಡರ ನಡುವೆ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳುತ್ತೇವೆ. ನಾಲ್ಕು ಗೋಡೆ ಮಧ್ಯೆ ಚರ್ಚಿಸುವ ಸಂಗತಿ ಗಳನ್ನು ಬಾಹ್ಯವಾಗಿ ಹೇಳಲು ಬಯಸು ವದಿಲ್ಲ. ಅಂತಹ ಭಿನ್ನಾಭಿಪ್ರಾಯ ಇದ್ದರೆ ಆಂತರಿಕವಾಗಿ ಪರಸ್ಪರ ಸಮಾ ಲೋಚಿಸಿ ಪಕ್ಷದ ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ತಾಲ್ಲೂಕಿನ ಮಂಜುಗುಣಿ ಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿ ಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ನಾಯಕತ್ವದಲ್ಲಿ ನಮ್ಮೆಲ್ಲ ರಿಗೂ ವಿಶ್ವಾಸವಿದೆ. ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ನಾನು ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಲ್ಲ ಎಂದು ರಾಜ್ಯ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೊಮ್ಮೆ ಸ್ಪಷ್ಟಪಡಿ ಸಿದರು.ಕಾರವಾರದಲ್ಲಿ ಕೈಗಾ ಅಣು ಸ್ಥಾವರದ ಐದು ಕಿಲೋ ಮೀಟರ್ ವ್ಯಾಪ್ತಿಯ ನಾಗರಿಕರು ತಮ್ಮನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಅನೇಕ ದಿನಗಳಿಂದ ನಡೆಸುತ್ತಿರುವ ಧರಣಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದು ತಿಳಿಸಲಾಗಿದೆ. ಹೋರಾಟಗಾರರು ಧರಣಿ ಹಿಂಪಡೆಯಬೇಕು. ಕೈಗಾ ಸುತ್ತಮುತ್ತದ ಪ್ರದೇಶದಲ್ಲಿ    ಆರೋಗ್ಯ ಸಮೀಕ್ಷೆ ನಡೆಯುತ್ತಿದೆ ಎಂದರು.ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು ಇದು ಸಕಾಲವಾಗಿದ್ದು, ಜಿಲ್ಲೆ ಧಾರವಾಡ ಹಾಲು ಒಕ್ಕೂಟದ ಜೊತೆಯೇ ಮುಂದುವರೆಯುತ್ತದೆಯೇ ಎಂಬ ಪ್ರಶ್ನೆಗೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಬೇಕು ಎಂಬುದು ನಿರ್ವಿವಾದ. ಈ ಸಂಗತಿ ಸರ್ಕಾರದ ಗಮನದಲ್ಲಿದೆ. ಆದರೆ ಹೈನೋದ್ಯಮ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಅವರು ಹೇಳಿದರು. ಟಿ.ಎಸ್.ಎಸ್., ಟಿ.ಎಂ.ಎಸ್. ನಂತಹ ಸಹಕಾರಿ ಸಂಸ್ಥೆಗಳು ಮಿನಿ ಒಕ್ಕೂಟ ಸ್ಥಾಪಿಸಲು ಮುಂದಾಗಬೇಕು ಎಂದರು.ಉತ್ತರ ಕನ್ನಡ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ವರ್ಗಾವಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತ ವಾಗುತ್ತಿರುವ ವಿರೋಧದ ಕುರಿತು ಕೇಳಿದ ಪ್ರಶ್ನೆಗೆ ಅವರೇ ಸ್ವತಃ ವೈಯಕ್ತಿಕ ಕಾರಣಕ್ಕಾಗಿ ವರ್ಗಾವಣೆ ಬಯಸಿ ತೆರಳುತ್ತಿದ್ದಾರೆ. ಅವರು ಕಳೆದ ಆರು ತಿಂಗಳಿನಿಂದ ವರ್ಗವಣೆಯನ್ನು ಬಯ ಸಿದ್ದರು ಎಂದರು.ಜಿಲ್ಲೆಯ ಗ್ರಾಮೀಣ ಸೇರಿದಂತೆ ಎಲ್ಲ ರಸ್ತೆಗಳನ್ನು 10 ದಿನಗಳ ಒಳಗೆ ಸರಿ ಪಡಿಸಬೇಕು ಎಂದು ಮುಖ್ಯಮಂತ್ರಿ ಹೇಳಿ ಹೋಗಿ ಇಷ್ಟು ದಿನ ಕಳೆದರೂ ಕಾಮಗಾರಿ ವಿಳಂಬವಾಗಿದೆ ಎಂಬ ಪ್ರಶ್ನೆಗೆ ಆಡಳಿತಾತ್ಮಕ ತೊಂದರೆಯಿಂದ ಕಾಮಗಾರಿಗಳು ವಿಳಂಬವಾಗಿವೆ. ದುರಸ್ತಿ ಮಾಡಲಾಗುವುದು ಎಂದು ಸಮರ್ಥಿಸಿಕೊಂಡರು.

Post Comments (+)