ಗುರುವಾರ , ಜೂನ್ 24, 2021
21 °C
ಡೆಪ್ಯುಟಿ ಗವರ್ನರ್‌ಗೆ ಹುಡುಕಾಟ ಆರಂಭ; ರಾಜನ್‌

ಭಿನ್ನಾಭಿಪ್ರಾಯ ಇರಲಿಲ್ಲ: ಚಕ್ರವರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಸೇವಾವಧಿ ಪೂರ್ಣ ಗೊಳ್ಳುವ ಮುನ್ನವೇ ತಮ್ಮ ಹುದ್ದೆ ತೊರೆ ದಿರುವ ಭಾರತೀಯ ರಿಸರ್ವ್‌ ಬ್ಯಾಂಕಿನ ಡೆಪ್ಯುಟಿ ಗವರ್ನರ್‌ ಕೆ.ಸಿ.ಚಕ್ರವರ್ತಿ, ‘ರಾಜೀನಾಮೆ ಏನಿದ್ದರೂ ತಮ್ಮ ವೈಯ ಕ್ತಿಕ ನಿರ್ಧಾರ. ಗವರ್ನರ್‌ ರಘುರಾಂ ರಾಜನ್‌ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ’ ಎಂದು ಸ್ಪಷ್ಟ ಪಡಿಸಿದ್ದಾರೆ.‘ಆರ್‌ಬಿಐ’ನ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆಗೆ ಸಂಬಂಧಿಸಿದಂತೆ ತಮ್ಮ ಹಾಗೂ ರಾಜನ್‌ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಈಗ ಅವಧಿಗೆ ಸ್ವಲ್ಪ ಮುಂಚೆ ರಾಜೀ­ನಾಮೆ ಸಲ್ಲಿಸಿದ್ದೇನೆಯೇ ಹೊರತು ತರಾ ತುರಿಯಲ್ಲಿ ಓಡಿ ಹೋಗುತ್ತಿಲ್ಲ’ ಎಂದು  ಅವರು ಸುದ್ದಿಗಾರರ ಪ್ರಶ್ನೆಗೆ ಇಲ್ಲಿ ಶುಕ್ರವಾರ ಉತ್ತರಿಸಿ­ದರು.

ಕೇಂದ್ರ ಹಣಕಾಸು ಸಚಿವ ಪಿ. ಚಿದಂ ಬರಂ ಅವರನ್ನು ಭೇಟಿಯಾಗು­ತ್ತೀರಾ ಎಂಬ ಪ್ರಶ್ನೆಗೆ, ರಘುರಾಂ ರಾಜನ್‌ ಅವರೇ, ಹಣಕಾಸು ಸಚಿವರಿಗೆ ಈ ವಿಷಯ ಅರಹುತ್ತಾರೆ’ ಎಂದುಕೊಂಡಿ ದ್ದೇನೆ ಎಂದು ಚುಟುಕಾಗಿ ಪ್ರತಿಕ್ರಿಯಿಸಿ ದರು.ಶುಭ ಕೋರಿದ ರಾಜನ್‌

ಕೆ.ಸಿ.ಚಕ್ರವರ್ತಿ ಅವರಿಗೆ ಶುಭ ಕೋರಿ ರುವ ರಾಜನ್‌, ಜಾಗತಿಕ ಆರ್ಥಿಕ ಅಸ್ಥಿರತೆಯಂತಹ ಅತ್ಯಂತ ಸವಾಲಿನ ಕಾಲಘಟ್ಟದಲ್ಲಿ ಅವರು ಕಾರ್ಯನಿರ್ವ­ಹಿಸಿದ್ದಾರೆ. ಅವರ ಉತ್ತರಾಧಿ­ಕಾರಿ­ಯಾಗಿ ಹೊಸ ಡೆಪ್ಯುಟಿ ಗವರ್ನರ್‌ ನೇಮ­ಕಕ್ಕೆ  ಹುಡುಕಾಟ ಪ್ರಾರಂಭಿಸಿ­ದ್ದೇವೆ’ ಎಂದು ಹೇಳಿದರು.ಹಣದುಬ್ಬರ  ತಗ್ಗಿಸಲು ‘ಆರ್‌ಬಿಐ’ ಬಡ್ಡಿ ದರ ಏರಿಕೆಯ ಕಠಿಣ ನೀತಿ ಅನು ಸರಿಸಿದಾಗ, ಬ್ಯಾಂಕುಗಳ ನಗದು ಮೀಸಲು ಅನುಪಾತ (ಸಿಆರ್‌ಆರ್‌) ತಗ್ಗಿಸುವ ಮೂಲಕ ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಬಿಡುಗಡೆ ಮಾಡಬ­ಹುದು ಎಂಬ ಹೊಳಹು ನೀಡಿದವರು  ಚಕ್ರವರ್ತಿ. ‘ಆರ್‌ಬಿಐ’ನ ದೂರ ದೃಷ್ಟಿಯ ‘ಆರ್ಥಿಕ ಬಿಕ್ಕಟ್ಟು ನಿಗಾ ವ್ಯವಸ್ಥೆ’ ಯೂ ಅವರದೇ ಯೋಜನೆ.‘ಆರ್‌ಬಿಐ’ ಡೆಪ್ಯುಟಿ ಗವರ್ನರ್‌ ಆಗಿದ್ದ ಆನಂದ ಸಿನ್ಹಾ ಜನವರಿಯಲ್ಲಿ ನಿವೃತ್ತ­ರಾ­ಗಿದ್ದಾರೆ. ಇದೀಗ ಚಕ್ರವರ್ತಿ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ  ಇಬ್ಬರು ಡೆಪ್ಯುಟಿ ಗವರ್ನರ್‌ ಹುದ್ದೆಗೆ ನೇಮಕ ನಡೆಯಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.