ಭೀಕರ ಅಪಘಾತ: ನಾಲ್ಕು ಎಮ್ಮೆ ಬಲಿ

7

ಭೀಕರ ಅಪಘಾತ: ನಾಲ್ಕು ಎಮ್ಮೆ ಬಲಿ

Published:
Updated:
ಭೀಕರ ಅಪಘಾತ: ನಾಲ್ಕು ಎಮ್ಮೆ ಬಲಿ

ಹುನಗುಂದ: ಇಲ್ಲಿನ ಚಿತ್ರದುರ್ಗ-ಸೋಲಾಪುರ ಚತುಷ್ಪಥ ಹೆದ್ದಾರಿಯಲ್ಲಿ ಬುಧವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಗರದ ರೈತ ಮುತ್ತಣ್ಣ ಬಸಪ್ಪ ಡಂಬಳ ಎಂಬುವರ ನಾಲ್ಕು ಎಮ್ಮೆಗಳು ಸ್ಥಳದಲ್ಲೇ ಸತ್ತಿವೆ. ಎಮ್ಮೆಗಳ ಜೊತೆಗಿದ್ದ ದೇವರ ಕೋಣವೊಂದು ಭಾರಿ ಪ್ರಮಾಣದಲ್ಲಿ ಗಾಯಗೊಂಡಿದೆ ಎನ್ನಲಾಗಿದೆ.ಮೇಯಲು ಹೋದ ಈ ಎಮ್ಮೆಗಳು ಸಂಜೆ ಹೊತ್ತಿಗೆ ಮನೆಗೆ ಬರುತ್ತಿದ್ದಾಗ ಧನ್ನೂರು ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಸತ್ತ ಎಮ್ಮೆಗಳನ್ನು ದಾರಿ ಬಿಟ್ಟು ಸಾಗಿಸುವಾಗ ಕೆಲಹೊತ್ತು ಸಂಚಾರ ಅಸ್ತವ್ಯಸ್ತವಾಯಿತು. ಅಪಘಾತಪಡಿಸಿದ ವಾಹನ ಸಿಕ್ಕಿದ್ದು. ಈ ಬಗ್ಗೆ ತನಿಖೆ ನಡೆದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ಪಿ.ಬಿ. ನೀಲಗಾರ ತಿಳಿಸಿದ್ದಾರೆ.ಭಾರಿ ಪ್ರಮಾಣದಲ್ಲಿ ಆದ ಈ ಅಪಘಾತದಲ್ಲಿ ಲಾರಿ ಹೊಡೆತಕ್ಕೆ ಸಿಕ್ಕ ಎಮ್ಮೆಗಳು ಬೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕೋಣವೊಂದು ಸಿಕ್ಕು ತೀವ್ರವಾಗಿ ಗಾಯಗೊಂಡು ಹೊಲದಲ್ಲಿ ಬಿದ್ದಿದೆ. ಸುಮಾರು ನಾಲ್ಕು ಎಮ್ಮೆಗಳ ಬೆಲೆ ಅಂದಾಜು 1ಲಕ್ಷವಾಗಬಹುದು ಎಂದು ಎಮ್ಮೆಗಳ ಮಾಲೀಕ ಮುತ್ತಣ್ಣ ಹೇಳಿದ್ದಾರೆ.ಹುನಗುಂದದಲ್ಲಿ ಹಾದು ಹೋದ ಈ ಚತುಷ್ಪಥ ಹೆದ್ದಾರಿಗೆ ಧನ್ನೂರು ಕ್ರಾಸ್ ಮತ್ತು ನಾಗಲಿಂಗನಗರ ಬಳಿ ಮೇಲು ಸೇತುವೆ ಮಾಡಿ ಎಂದರೂ ಇಲಾಖೆ ಕಿವಿಗೊಡಲಿಲ್ಲ.

ಭಾರಿ ಪ್ರಮಾಣದಲ್ಲಿ ಭಾರಿ ವಾಹನಗಳು ಚಲಿಸುತ್ತಿದ್ದು ಆಗಾಗ ಅಪಘಾತಗಳಾಗುತ್ತಿವೆ. ರೈತರು ಮತ್ತು ಜಾನುವಾರುಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗಂಭೀರ ಚಿಂತನೆ ಮಾಡಿ ಜೀವಹಾನಿ ತಡೆಯಬೇಕೆಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry