ಭೀಕರ ಅಪಘಾತ: 8 ಸಾವು

7

ಭೀಕರ ಅಪಘಾತ: 8 ಸಾವು

Published:
Updated:

ಹೂವಿನಹಡಗಲಿ (ಬಳ್ಳಾರಿ): ತಾಲ್ಲೂಕಿನ ಇಟ್ಟಿಗಿ ಗ್ರಾಮದ ಹರಪನಹಳ್ಳಿಗೆ ಹೋಗುವ ಹೊರವಲಯದ ಬಳಿ ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಟ್ರ್ಯಾಕ್ಸ್ ನಡುವೆ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.ದಾವಣಗೆರೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದವರು ಸೇರಿಕೊಂಡು ತಿಂಥಿಣಿಯ ಮೌನೇಶ್ವರ ಜಾತ್ರೆಗೆ ಟ್ರ್ಯಾಕ್ಸ್‌ನಲ್ಲಿ ಹೊರಟಿದ್ದರು.  ರಾಯಚೂರಿನಿಂದ ಸಾಗರಕ್ಕೆ ಹೊರಟಿದ್ದ ಬಸ್ ಈ ಟ್ರ್ಯಾಕ್ಸ್‌ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.ಶ್ರೀನಿವಾಸ ಪತ್ತಾರ   (58), ನಾಗರಾಜ ಆಚಾರ್ (52), ಗೋಪಾಲಾಚಾರ್ (48), ಚಾಲಕ ಮೌನೇಶಾಚಾರ್ (30), ದ್ರೋಣಾಚಾರ್ (45)  ಸ್ಥಳದಲಿಯ್ಲೌ ಕೊನೆಯುಸಿರೆಳೆದರು.  ಮಲ್ಲಿಕಾರ್ಜುನ ಆಚಾರ್ಯ (52) ಇಟ್ಟಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಕೊಟ್ರೇಶ ಆಚಾರ್ಯ (45) ಮತ್ತು ಭದ್ರಾಚಾರಿ (48) ದಾವಣಗೆರೆ ಸಿ.ಜೆ. ಆಸ್ಪತೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಟ್ರ್ಯಾಕ್ಸ್‌ನಲ್ಲಿ 14 ಜನರಿದ್ದರು. ಉಳಿದ 7 ಜನರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.   ಬಿ. ಕೊಟ್ರೇಶ, ವಿ.ಎಂ.ಕೊಟ್ರೇಶಾಚಾರಿ, ಮಾನಾಚಾರಿ, ಜನಾರ್ದನಾಚಾರಿ, ಆಂಜನಾಚಾರಿ, ಪೂರ್ವಾಚಾರಿ ಗಾಯಗೊಂಡಿದ್ದಾರೆ. ಬಸ್ ಚಾಲಕನನ್ನು  ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry