ಶುಕ್ರವಾರ, ಅಕ್ಟೋಬರ್ 18, 2019
27 °C

ಭೀಕರ ರಸ್ತೆ ಅಪಘಾತ ಇಬ್ಬರ ಸಾವು

Published:
Updated:

ಲಕ್ಷ್ಮೇಶ್ವರ: ಹುಬ್ಬಳ್ಳಿ ಕಡೆಯಿಂದ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ಟಾಟಾ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಮಗಿರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹತ್ತಿರ ರಸ್ತೆ ಪಕ್ಕದ ತಗ್ಗಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದು ತೀವ್ರವಾಗಿ ಗಾಯಗೊಂಡ ಮತ್ತಿಬ್ಬರನ್ನು ಹುಬ್ಬಳ್ಳಿ ಲೈಫ್‌ಲೈನ್ ಆಸ್ಪತ್ರೆಗೆ ದಾಖಲಿಸಿದ ಘಟನೆ ರವಿವಾರ ಮಧ್ಯ ರಾತ್ರಿ ಸಂಭವಿಸಿದೆ.ಪಟ್ಟಣದ ಪುಟ್ಟಪ್ಪ ಈರಪ್ಪ ಮುಳಗುಂದ (45) ಮಂಜುನಾಥ ಮಹಾದೇವಪ್ಪ ಹೊಸಮನಿ (45) ಮೃತಪಟ್ಟ ವ್ಯಕ್ತಿಗಳಾಗಿದ್ದು ಗಂಗಾಧರ ಮುಳಗುಂದ ಹಾಗೂ ರುದ್ರಪ್ಪ ನರೇಗಲ್ ಭೀಕರವಾಗಿ ಗಾಯಗೊಂಡಿದ್ದಾರೆ. ಇವರು ತಮ್ಮ ಇಂಡಿಕಾ ಕಾರಿನಲ್ಲಿ ರಾತ್ರಿ ಹುಬ್ಬಳ್ಳಿ ಕಡೆಯಿಂದ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

Post Comments (+)