ಸೋಮವಾರ, ಡಿಸೆಂಬರ್ 9, 2019
21 °C

ಭೀಮಸೇನ ಜೋಷಿ ಆರೋಗ್ಯ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೀಮಸೇನ ಜೋಷಿ ಆರೋಗ್ಯ ಗಂಭೀರ

ಪುಣೆ, (ಐಎಎನ್‌ಎಸ್): ಅನಾರೋಗ್ಯದಿಂದ ಇಲ್ಲಿನ ಆಸ್ಪತ್ರೆಗೆ ಸೇರಿರುವ ಪ್ರಸಿದ್ಧ ಹಿಂದೂಸ್ತಾನಿ ಸಂಗೀತ ಹಾಡುಗಾರ ಭೀಮಸೇನ ಜೋಷಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಶನಿವಾರ ತಿಳಿಸಿದ್ದಾರೆ.‘ಅವರು ಕೃತಕ ಉಸಿರಾಟದ ಮೇಲಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಮಾಡುವ ಅಗತ್ಯವಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಕಳೆದ 12 ಗಂಟೆಗಳಿಂದ ಹದಗೆಟ್ಟಿರುವ ಅವರ ಆರೋಗ್ಯದ ಯಥಾಸ್ಥಿತಿ ಮುಂದುವರಿದಿದೆ’ ಎಂದು ದಶಕಗಳಿಂದ ಅವರನ್ನು ನೋಡಿಕೊಳ್ಳುತ್ತಿರುವ ಡಾ. ಅತುಲ್ ಜೋಷಿ ಸುದ್ದಿ ಸಂಸ್ಥೆಗೆ ತಿಳಿಸಿದರು.ವೃದ್ಧಾಪ್ಯಕ್ಕೆ ಸಂಬಂಧಿಸಿದಂತೆ ಕಂಡುಬರುವ ಲಕ್ಷಣಗಳಿಂದ ಹಾಗೂ ನಿಶ್ಶಕ್ತಿಯಿಂದ ಕಳೆದ ಡಿಸೆಂಬರ್ 31ರಂದು ಅವರನ್ನು ಸಹ್ಯಾದ್ರಿ ಆಸ್ಪತ್ರೆಗೆ ಸೇರಿಸಲಾಗಿತ್ತು’ ಎಂದು ಅವರು ಹೇಳಿದರು.

 

ಪ್ರತಿಕ್ರಿಯಿಸಿ (+)