ಭೀಮಾ ನೆರೆ ಹಾವಳಿ: ಮುನ್ನೆಚ್ಚರಿಕೆ ಸಭೆ

ಸೋಮವಾರ, ಜೂಲೈ 22, 2019
27 °C

ಭೀಮಾ ನೆರೆ ಹಾವಳಿ: ಮುನ್ನೆಚ್ಚರಿಕೆ ಸಭೆ

Published:
Updated:

ಅಫಜಲಪುರ: ಮಳೆಗಾಲ ಆರಂಭವಾಗಿದ್ದರಿಂದ ಭೀಮಾ ನದಿಯಿಂದ ಬರುವ ನೆರೆ ಹಾವಳಿಯನ್ನು ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಸೋಮವಾರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಎ.ಟಿ.ಜಯಪ್ಪ ಮಾತನಾಡಿ, ಎಲ್ಲ ಅಧಿಕಾರಿ ವರ್ಗದವರು ಭೀಮಾ ನೆರೆ ಹಾವಳಿ ಕುರಿತು ಈಗಲೆ ಸನ್ನದ್ಧರಾಗಬೇಕು ಯಾವ ಅಧಿಕಾರಿಗಳು ರಜೆ ಹೋಗುವಂತಿಲ್ಲ. ಅದರಲ್ಲಿ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು, ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿರಬೇಕು. ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ಆಫ್ ಮಾಡಬಾರದು ಎಂದು ಅವರು ತಿಳಿಸಿದರು.ನೆರೆ ಹಾವಳಿಯಿಂದ ಜನರ ಜೀವನ ಕಾಪಾಡಲು ಮತ್ತು ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಅದಕ್ಕಾಗಿ ಗಂಜಿ ಕೇಂದ್ರ ತೆರೆಯಲು ವ್ಯವಸ್ಥೆ ಕುರಿತು ಈಗಲೆ ಕ್ರಮಕೈಗೊಳ್ಳಬೇಕು ಭೀಮಾ ನೆರೆ ಹಾವಳಿಗೆ ತುತ್ತಾಗುವ 14 ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ, ಶಾಲೆ, ಸಮುದಾಯ ಭವನ, ವಸತಿ ನಿಲಯಗಳು ಯಾವ ಸ್ಥಿತಿಯಲ್ಲಿವೆ ಮತ್ತು ಅವುಗಳ ದುರಸ್ತಿ ಮಾಡಬೇಕಾಗಿದೆ, ವಿದ್ಯುತ್ ವ್ಯವಸ್ಥೆ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ಮಾಡಿ ತಾಲ್ಲೂಕು ಆಡಳಿತಕ್ಕೆ ವರದಿ ಮಾಡಬೇಕೆಂದು ತಾ.ಪಂ. ಅಧಿಕಾರಿ ಸಂಪತ್ತ ಪಾಟೀಲ ಸಭೆಯಲ್ಲಿ ತಿಳಿಸಿದರು.14 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ವೈದ್ಯರ ನೇಮಕ, ಪಶುಸಂಗೋಪನೆಯವರ ಪರಿಶೀಲನೆ ಇವೆಲ್ಲದರ ಬಗ್ಗೆ ಕ್ರಮಕೈಗೊಳ್ಳಬೇಕು. ನೆರೆ ಹಾವಳಿ ಬಂದಾಗ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆಯವರು ಸನ್ನದ್ಧರಾಗಿರಬೇಕು ಪ್ರತಿ ಮೂರು ಗ್ರಾಮ ಪಂಚಾಯಿತಿಗೆ ಒಬ್ಬ ಎಂಜನಿಯರ್ ಹಾಗೂ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.ಬೋಟ್ ವ್ಯವಸ್ಥೆ:ಉಡಚಾಣ, ದೇವಲಗಾಣಗಾಪೂರ, ಟಾಕಳಿ, ಭೋಸಗಾ, ಕೆರಕನಳ್ಳಿ ಗ್ರಾಮಗಳಲ್ಲಿ ಬೋಟ್‌ಗಳಿವೆ ಅವುಗಳನ್ನು ಸುಸ್ಥಿತಿಯಲ್ಲಿಡಲು ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ಪರಿಶೀಲನೆ ಮಾಡಿ ಕ್ರಮಕೈಗೊಳ್ಳಬೇಕು. ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ರಜೆಯ ಮೇಲೆ ಹೋಗಬೇಕಾದರೆ ತಹಸೀಲ್ದಾರರಿಂದ ಅನುಮೋದನೆ ಪಡೆಯಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.ಅಣಕು ನಾಟಕ: ನೆರೆ ಹಾವಳಿ ಬಂದಾಗ ಯಾವ ರೀತಿಯಲ್ಲಿ ಅದನ್ನು ನಿಯಂತ್ರಿಸಬೇಕು ಎಂಬುವದರ ಬಗ್ಗೆ ಜೂನ್.30 ರಂದು ಬಳೂಂಡಗಿ ಗ್ರಾಮದಲ್ಲಿ ನೆರೆ ಹಾವಳಿ ಕುರಿತು ಅಣಕು ನಾಟಕ ಪ್ರದರ್ಶನ ಮಾಡಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry