ಭೀಮೆಗೆ ನೀರು: ರೈತರಲ್ಲಿ ಸಂತಸ

7

ಭೀಮೆಗೆ ನೀರು: ರೈತರಲ್ಲಿ ಸಂತಸ

Published:
Updated:
ಭೀಮೆಗೆ ನೀರು: ರೈತರಲ್ಲಿ ಸಂತಸ

ಆಲಮೇಲ: : ಮಳೆಗಾಲ ಆರಂಭ ವಾದಾಗಿನಿಂದಲೂ ಸದಾ ನೀರಿಲ್ಲದೇ ಭಣ ಗುಡುತ್ತಿದ್ದ ಭೀಮಾ ನದಿಗೆ ಸೋಮವಾರ ರಾತ್ರಿ ನೀರು ಬಂದಿದ್ದು ಜನರಲ್ಲಿ ಸಂತಸ ಮೂಡಿಸಿದೆ.ಕಳೆದ ಹಲವಾರು ತಿಂಗಳುಗಳಿಂದ ಭೀಮೆಗೆ ನೀರು ಬಿಡಬೇಕು ಎಂದು ಕೋರಿ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ  ರೈತ ಮುಖಂಡರು  ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಕೂಡ ಅದು ಯಾವ  ಪರಿಣಾಮ ಬೀರಿರಲಿಲ್ಲ. ಆದರೆ ಈಗ ನದಿಪಾತ್ರ ದಲ್ಲಿ ಮಳೆಯಾದ ಕಾರಣ ಭೀಮಾ ನದಿಯಲ್ಲಿ ನೀರು ಬಂದಿದ್ದು ದೇವಣ ಗಾಂವ ಸಮೀಪದ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಸೊನ್ನ ಬ್ಯಾರೇಜಿ ನಲ್ಲಿ ಎರಡು ಗೇಟುಗಳನ್ನು ತೆರೆಯ ಲಾಗಿದೆ.  ಸದ್ಯಕ್ಕೆ ಭೀಮಾ ನದಿ ಮೈತುಂಬಿ ಹರಿಯುತ್ತಿರುವುದರಿಂದ ಕಡಣಿ, ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಬೇವಾಡ, ಕುಮಸಗಿ, ಚಿಕ್ಕಹವಳಗಿ ಗ್ರಾಮಗಳಲ್ಲಿನ ಜನರು, ರೈತರು ಖುಷಿಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry