ಗುರುವಾರ , ಮೇ 13, 2021
35 °C

ಭುಗಿಲೆದ್ದ ತೆಲಂಗಾಣ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್, (ಐಎಎನ್‌ಎಸ್): ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ತೆಲಂಗಾಣ ಪರ ಹೋರಾಟಗಾರರು, ಟಿಡಿಪಿ ಕಾರ್ಯಕರ್ತರು ರಾಜ್ಯದ ವಿವಿಧೆಡೆ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಶಿಬಿರಗಳ ಮೇಲೆ ಶುಕ್ರವಾರ ದಾಳಿ ನಡೆಸಿದರು. ಇದರಿಂದ ಪ್ರತ್ಯೇಕ ರಾಜ್ಯಕ್ಕಾಗಿ ಕಳೆದ 11 ದಿನಗಳಿಂದ ನಡೆಯುತ್ತಿರುವ ಹೋರಾಟ ಭುಗಿಲೆದ್ದಿದೆ.ಕೆಲ ಜಿಲ್ಲೆಗಳಲ್ಲಿ ಪ್ರತ್ಯೇಕ ತೆಲಂಗಾಣಕ್ಕಾಗಿ ಒತ್ತಾಯಿಸಿ ನಡೆಸಲು ಉದ್ದೇಶಿಸಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳದಂತೆ ತೆಲಂಗಾಣ ಕಾರ್ಯಕರ್ತರು ಟಿಡಿಪಿ ನಾಯಕರನ್ನು ತಡೆದರು. ತೆಲಂಗಾಣ ಪರ ಹೋರಾಟದಿಂದ ಟಿಡಿಪಿ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು. ಇದೇ ವೇಳೆ, ಇದೇ ಜಿಲ್ಲೆಯ ಹನುಮಕೊಂಡ ಪಟ್ಟಣದಲ್ಲೂ ವಿದ್ಯಾರ್ಥಿಗಳು ಮತ್ತು ತೆಲಂಗಾಣ ಕಾರ್ಯಕರ್ತರು ಟಿಡಿಪಿ ಬೆಂಬಲಿಗರೊಂದಿಗೆ ಘರ್ಷಣೆಗೆ ಇಳಿದಾಗ, ಪೊಲೀಸರು ಲಾಠಿ ಪ್ರಹಾರ ನಡೆಸಿದರು.  ಆಗ ಕೆಲವು ವಿದ್ಯಾರ್ಥಿಗಳು ಗಾಯಗೊಂಡರು. ಅಂತೆಯೇ ಟಿಡಿಪಿ ತೆಲಂಗಾಣ ವೇದಿಕೆ ಸಂಚಾಲಕ ಇ. ದಯಾಕರ ರಾವ್ ಸತ್ಯಾಗ್ರಹದ ವೇದಿಕೆ ಬಳಿ ಬರುತ್ತಿದ್ದಂತೆಯೇ ಜೆಎಸಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದರು. ಎರಡೂ ಬಣಗಳ ಘರ್ಷಣೆಯಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.