ಮಂಗಳವಾರ, ಜನವರಿ 21, 2020
19 °C
ಮುಲ್ಲಾಗೆ ಗಲ್ಲು: ಜಮಾತೆ – ಅವಾಮಿ ಕಾರ್ಯಕರ್ತರ ಘರ್ಷಣೆ

ಭುಗಿಲೆದ್ದ ಹಿಂಸಾಚಾರ: ನಾಲ್ವರ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುಗಿಲೆದ್ದ ಹಿಂಸಾಚಾರ: ನಾಲ್ವರ ಬಲಿ

ಢಾಕಾ(ಪಿಟಿಐ): ಬಾಂಗ್ಲಾದೇಶದ ಮೂಲ­ಭೂತ­­ವಾದಿ ಜಮಾತೆ ಇಸ್ಲಾಮಿ ಪಕ್ಷದ ನಾಯಕ ಅಬ್ದುಲ್‌ ಖಾದರ್ ಮುಲ್ಲಾನನ್ನು ಗುರು­ವಾರ ರಾತ್ರಿ ಗಲ್ಲಿಗೇರಿಸಿದ ಬೆನ್ನಲ್ಲೇ ದೇಶ­ದಾದ್ಯಂತ ಭುಗಿಲೆದ್ದ ವ್ಯಾಪಕ ಹಿಂಸಾಚಾರಕ್ಕೆ  ನಾಲ್ವರು ಬಲಿಯಾಗಿದ್ದಾರೆ.ಜಮಾತೆ ಇಸ್ಲಾಮಿ ಕಾರ್ಯಕರ್ತರು ಹಾಗೂ ಅವಾಮಿ ಲೀಗ್‌ ಕಾರ್ಯಕರ್ತರ ನಡುವಿನ ಘರ್ಷ­ಣೆಯಲ್ಲಿ ಇವರು ಬಲಿಯಾಗಿದ್ದಾರೆ.ಮುಲ್ಲಾನನ್ನು ನೇಣಿಗೇರಿಸಿದ ಸುದ್ದಿ ಹಬ್ಬು­ತ್ತಿದ್ದಂತೆ ಆಕ್ರೋಶಗೊಂಡ ಜಮಾತೆ ಕಾರ್ಯ­ಕ­ರ್ತರು ಹಾಗೂ ಇದರ ವಿದ್ಯಾರ್ಥಿ ಘಟಕದ ಕಾರ್ಯಕರ್ತರು 50ಕ್ಕೂ ಹೆಚ್ಚು ಮನೆ, ವಾಹನ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ­ದರು.ಇವರ ದಾಳಿಯಿಂದ ಆವಾಮಿ ಲೀಗ್‌ ಕಾರ್ಯ­­ಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದವರು ತೊಂದರೆಗೊಳ­ಗಾಗಿ­ದ್ದಾರೆ. ಪ್ರಧಾನಿ ಶೇಖ್‌ ಹಸೀನಾ ಬೆಂಬಲಿಗರು ಎಂಬ ಕಾರಣಕ್ಕೆ ಹಿಂದೂಗಳ ಮೇಲೆ ದಾಳಿ ನಡೆಸಲಾಗಿದೆ. ರಾಜಧಾನಿ ಢಾಕಾದಲ್ಲಿ ಭಾರಿ ಬಂದೋ­ಬಸ್ತ್‌ ಮಾಡಲಾಗಿದ್ದು, ಹಲವು ನಗರ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.ಪ್ರತೀಕಾರದ ಬೆದರಿಕೆ: ಮುಲ್ಲಾ ಗಲ್ಲು ‘ರಾಜ­ಕೀಯ ಕೊಲೆ’ ಎಂದು ಕರೆದಿರುವ ಜಮಾತೆ ಪಕ್ಷ, ನಾಯಕನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆ ಒಡ್ಡಿದೆ.ಜಮಾತ್‌ ಬೆಂಬಲಿಗರು ಹಲವು ಕಡೆಗಳಲ್ಲಿ ಕಚ್ಚಾಬಾಂಬ್‌ಗಳನ್ನು ಎಸೆದಿದ್ದರು. ಜೊತೆಗೆ  ಪೊಲೀ­ಸರೊಂದಿಗೆ ಘರ್ಷಣೆ ಗೂ ಇಳಿದಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರೂ ಸಹ ಗಾಳಿ­ಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಮುಲ್ಲಾ ಗಲ್ಲು ವಿರೋಧಿಸಿ ಇಸ್ಲಾಮಿಕ್‌ ಪಕ್ಷ ಭಾನುವಾರ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ.ಅಂತ್ಯಸಂಸ್ಕಾರ: ಮುಲ್ಲಾ ಮೃತದೇಹವನ್ನು ಫರೀ­ದ್‌­­ಪುರ ಜಿಲ್ಲೆಯ ಅಮೀರಾಬಾದ್‌್ ಗ್ರಾಮದಲ್ಲಿ ಆತನ ಪೂರ್ವಜರ ಭೂಮಿಯಲ್ಲಿ ಅಂತ್ಯ­ಸಂಸ್ಕಾರ ನಡೆಸಲಾಯಿತು.ಆತಂಕ: ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ಹೆಚ್ಚಿನ ದಾಳಿ ನಡೆ­ಯುವ ಸಾಧ್ಯತೆ ಇದೆ ಎಂದು ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಆತಂಕ ವ್ಯಕ್ತಪಡಿಸಿದೆ.ಹಿಂದೂಗಳನ್ನೇ ಗುರಿಯಾಗಿರಿಸಿಕೊಂಡು ಹಿಂಸಾ­­ಚಾರ ನಡೆಯಲಿದೆ ಎಂದು ಬಾಂಗ್ಲಾ­ದೇಶ ಸಂಶೋಧಕ ಅಬ್ಬಾಸ್‌್ ಫಯಾಜ್‌ ಹೇಳಿದ್ದಾರೆ.ಹಿಂದೂ ಸಮುದಾಯದ ಜನರಿಗೆ ರಕ್ಷಣೆ ನೀಡಬೇಕು ಎಂದಿರುವ ಅವರು ಈ ವರ್ಷ­ದಾದ್ಯಂತ ನಡೆದ ಹಿಂಸಾಚಾರದಲ್ಲಿ ಹಲವು ಹಿಂದೂಗಳು ಮೃತಪಟ್ಟಿದ್ದರೂ ಯಾರಿಗೂ ಈವ­ಹೇಳಿದ್ದಾರೆ.ಅಮೆರಿಕ ಮನವಿ: ಮುಲ್ಲಾಗೆ ಗಲ್ಲು ವಿಧಿಸಿದ ನಂತರ ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಯಾವು­ದೇ ರೀತಿ ಕುಮ್ಮಕ್ಕು ನೀಡದಂತೆ ಅಲ್ಲಿನ ರಾಜ­ಕೀಯ ಪಕ್ಷಗಳಿಗೆ ಅಮೆರಿಕ ಮನವಿ ಮಾಡಿದೆ.ಬಾಂಗ್ಲಾದಲ್ಲಿ ಈಗ ಸೂಕ್ಷ್ಮ ವಾತಾವರಣ­ವಿದೆ. ಈ ಸಂದರ್ಭವನ್ನೇ ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ವಿದೇ­ಶಾಂಗ ಇಲಾಖೆ ವಕ್ತಾರ ಮಾರಿ ಹಾರ್ಪ್‌ ಹೇಳಿದ್ದಾರೆ. ಹಿಂಸಾಚಾರ ಹಾಗೂ ಇತರ ಬೆಳವಣಿಗೆ­ಗ­ಳನ್ನು ವಿರೋಧ ಪಕ್ಷಗಳು ಮುಂದಿನ ಚುನಾವ­ಣೆಯಲ್ಲಿ ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.ಪಾಕ್‌ ಖಂಡನೆ: ಪಾಕಿಸ್ತಾನಕ್ಕೆ ನಿಷ್ಠರಾಗಿದ್ದ ಮುಲ್ಲಾನನ್ನು ಗಲ್ಲಿ­ಗೇರಿಸಿರುವು­ದು ದುರದೃಷ್ಟ ಕರ ಎಂದು ಪಾಕ್‌ ಆಂತರಿಕ ಭದ್ರತಾ ಸಚಿವ ಚೌಧರಿ ನಿಸಾರ್‌ ಅಲಿ ಖಾನ್‌ ಖಂಡಿಸಿದ್ದಾರೆ.ಮಾಜಿ ಸರ್ವಾಧಿಕಾರಿ ಆಸ್ಪತ್ರೆಗೆ ದಾಖಲು

ಢಾಕಾ(ಪಿಟಿಐ)
: ಭದ್ರತಾಪಡೆಗಳು ಶುಕ್ರ­ವಾರ ನಡೆಸಿದ ಕ್ಷಿಪ್ರ ಕಾರ್ಯಾಚರಣೆ­ಯಲ್ಲಿ ಬಂಧನ­ಕ್ಕೊಳಗಾಗಿದ್ದ ಬಾಂಗ್ಲಾ­ದೇಶದ  ಮಾಜಿ ಸರ್ವಾಧಿಕಾರಿ ಎಚ್‌.­ಎಂ. ಇರ್ಷಾದ್‌ ಅವ­ರನ್ನು ಸೇನಾ ಆಸ್ಪ­ತ್ರೆಗೆ ದಾಖಲಿಸಲಾಗಿದೆ. ಮುಂದಿನ ತಿಂಗಳು ನಡೆಯಲಿರುವ ಸಾರ್ವ­ತ್ರಿಕ ಚುನಾ­ವಣೆ­ ಬಹಿಷ್ಕರಿಸುವ ತೀರ್ಮಾನ ಕೈಗೊಂಡ  ಹಿನ್ನೆಲೆಯಲ್ಲಿ ಬಂಧಿಸಲಾಗಿದೆಅನಾ­ರೋ­ಗ್ಯ­­ಕ್ಕೊಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆ­ಯು­ತ್ತಿದ್ದ  ಇರ್ಷಾದ್‌ ಅವ­ರನ್ನು ಬಂಧಿಸ­ಲಾಗಿದೆ ಎಂದು ಅವರ ಸೇನೆಯ ಅಧಿಕಾರಿ ಹಬೀಬುರ್‌ ರೆಹಮಾನ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)