ಭಾನುವಾರ, ಜೂನ್ 13, 2021
25 °C
ನಗರದ ಮಾದರಿಯಲ್ಲಿ ಯೋಜನೆ ಜಾರಿಗೆ ಒಡಿಶಾ ಚಿಂತನೆ

ಭುವನೇಶ್ವರದಲ್ಲೂ ಸಮುದಾಯ ಪೊಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಥಳೀಯ ಮಟ್ಟದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ನಗರದಲ್ಲಿ ಎಂಟು ತಿಂಗಳ ಹಿಂದೆ ಆರಂಭವಾಗಿರುವ ‘ಸಮುದಾಯ ಪೊಲೀಸ್’ (ಕಮ್ಯುನಿಟಿ ಪೊಲೀಸಿಂಗ್‌) ಯೋಜನೆ ಕೆಲ ದಿನಗಳಲ್ಲಿ ಒಡಿಶಾದ ಭುವನೇಶ್ವರ ನಗರದಲ್ಲೂ ಆರಂಭಗೊಳ್ಳಲಿದೆ.ಜನಾಗ್ರಹ ಸಂಸ್ಥೆಯ ಸಹಭಾಗಿತ್ವದಲ್ಲಿ ನಗರ ಪೊಲೀಸರು 2013ರ ಜೂನ್‌ ತಿಂಗಳಲ್ಲಿ ಯೋಜನೆ ಜಾರಿಗೊಳಿಸಿದ್ದರು. ಇದೀಗ ಈ ಯೋಜನೆಯನ್ನು ಅಳವಡಿಸಿ­ಕೊಳ್ಳಲು ಒಡಿಶಾ ಪೊಲೀಸರು ಆಸಕ್ತ­ರಾಗಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತ­ನಾಡಿದ ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌, ‘ಯೋಜನೆಯನ್ನು ಅಳವಡಿಸಿಕೊಳ್ಳಲು ಒಡಿಶಾ ಪೊಲೀಸರು ಉತ್ಸುಕರಾಗಿದ್ದಾರೆ.ಈ ಬಗ್ಗೆ ಒಡಿಶಾದ ಪೊಲೀಸ್‌ ಮಹಾನಿರ್ದೇಶಕರು ರಾಜ್ಯ ಪೊಲೀಸ್‌ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದಾರೆ’ ಎಂದು ತಿಳಿಸಿದರು.

‘ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲ ದಿನಗಳಲ್ಲಿ ನಮ್ಮ ಸಂಸ್ಥೆಯ ಸದಸ್ಯರು ಭುವನೇಶ್ವರಕ್ಕೆ ಹೋಗಿ ಅಲ್ಲಿ ಯೋಜನೆಯನ್ನು ಅಳವಡಿಕೆಯ ಬಗ್ಗೆ ಕಾರ್ಯಾರಂಭ ಮಾಡಲಿದ್ದಾರೆ. ಸಂಸ್ಥೆಯ ಸಹಯೋಗದಲ್ಲಿ ಯೋಜನೆಯನ್ನು ಪ್ರಾಯೋಗಿಕ­ವಾಗಿ ಜಾರಿಗೆ ತರುವ ಬಗ್ಗೆ ಒಡಿಶಾ ಪೊಲೀಸರು ಚಿಂತನೆ ನಡೆಸಿದ್ದಾರೆ’ ಎಂದು ಜನಾಗ್ರಹ ಸಂಸ್ಥೆಯ ಸಂಚಾಲಕ ಕೆ.ಆರ್‌.ಪ್ರಸಾದ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.