ಬುಧವಾರ, ಏಪ್ರಿಲ್ 21, 2021
31 °C

ಭುವನೇಶ್ವರಿ ಪ್ರತಿಮೆ: ವಿರೋಧ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ನ್ಯೂಯಾರ್ಕ್ ಬಂದರಿನ  ‘ಸ್ವಾತಂತ್ರ್ಯ ದ್ವೀಪ’ದಲ್ಲಿರುವ  ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಒಂದು ಅತಿಭವ್ಯ ರಾಷ್ಟ್ರೀಯ ಸ್ಮಾರಕ.  ವಿಶ್ವದ ಅತಿದೊಡ್ಡ ಆ ಸ್ವಾತಂತ್ರ್ಯ ಸ್ತ್ರೀ ವಿಗ್ರಹವು ರಾಷ್ಟ್ರಪ್ರೇಮದ ಸಂಕೇತ. ಅಮೆರಿಕನ್ನರ ಹೆಮ್ಮೆಯನ್ನು ಉಕ್ಕಿಸುವ ಅದನ್ನು ನಾನು ನೋಡಿ ಪುಳಕಿತನಾಗಿದ್ದೆ. ಈಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕನ್ನಡ ಭುವನೇಶ್ವರಿ ಮೂರ್ತಿಯನ್ನು ರಾಜಧಾನಿಯಲ್ಲಿ ಸ್ಥಾಪಿಸಲು ಇಪ್ಪತ್ತೈದು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಕೆಲವರು ಅದನ್ನು ವಿರೋಧಿಸಿದ್ದಾರೆ.ಈಗಾಗಲೇ ಬೆಂಗಳೂರಿನಲ್ಲಿ ಹಲವು ಪ್ರತಿಮೆಗಳು ಸ್ಥಾಪನೆಗೊಂಡು ಆಯಾ ಪ್ರದೇಶದ ಸೊಬಗನ್ನು ಅರ್ಥವಂತಿಕೆಯನ್ನು ಹೆಚ್ಚಿಸಿವೆ. ಹೀಗಿರುವಾಗ ಕರ್ನಾಟಕ ಮಾತೆಯ ಸಂಕೇತವಾದ ಭುವನೇಶ್ವರಿ ಬೃಹತ್ ಪ್ರತಿಮೆಯನ್ನು ಜ್ಞಾನಭಾರತಿ ಆವರಣದಲ್ಲಿ ಸ್ಥಾಪಿಸುವ ಸೂಚನೆಯೂ ಕೂಡ ಸ್ವಾಗತಾರ್ಹ. ಬೆಂಗಳೂರು ಮೈಸೂರು ಮಧ್ಯದ ಎರಡು ಹೆದ್ದಾರಿಗಳ ಮಧ್ಯೆ ಇರುವ ಜ್ಞಾನಭಾರತಿ ಒಳ್ಳೆಯ ಪ್ರಶಾಂತವಾದ ಜಾಗ.  ಬೆಂಗಳೂರು ವಿವಿಯ ಪ್ರವೇಶದ್ವಾರದ ಎಡಕ್ಕೆ ಹಿಂಭಾಗದ ದೊಡ್ಡ ದಿಬ್ಬದ ಮೇಲೆ ಆ ಪ್ರತಿಮೆ ಸ್ಥಾಪನೆ ಮಾಡಲು ಯೋಚಿಸಬಹುದು. ಜ್ಞಾನಭಾರತಿ ಬಿಟ್ಟು ಬೇರೆ ಸೂಕ್ತ ಕಡೆ ಅದನ್ನು ಸ್ಥಾಪಿಸಿದರೆ ಅದೂ ಸ್ವಾಗತಾರ್ಹವೇ, ಕನ್ನಡಿಗರ ಅಭಿಮಾನದ ಸಂಕೇತವಾದ ಕಂಚಿನ ಭುವನೇಶ್ವರಿ ಭವ್ಯ ಪ್ರತಿಮೆ ಅರ್ಥಪೂರ್ಣವಾಗಿ ರೂಪುಗೊಂಡು ಆದಷ್ಟು ಬೇಗ ಸ್ಥಾಪಿತವಾಗಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.