ಭಾನುವಾರ, ಮೇ 22, 2022
26 °C

ಭೂಕಂಪಕ್ಕೆ 60 ಮಂದಿ ಬಲಿ, ನೂರಾರು ಮಂದಿ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಡಿಪಿಎ/ಎಎಫ್ ಪಿ): 8.9 ತೀವ್ರತೆಯ ಭಾರಿ ಭೂಕಂಪದಿಂದ ಹಾಗೂ ಅದರಿಂದೆದ್ದ ಸುನಾಮಿಯ ಭಾರಿ ಗಾತ್ರದ ಅಲೆಗಳಿಗೆ ಸಿಲುಕಿ ಜಪಾನಿನಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ನೂರಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. 100 ಮಂದಿ ಇದ್ದ ಹಡಗೊಂದು 33 ಅಡಿಯಷ್ಟು ದೊಡ್ಡದಾದ ಬೃಹತ್ ಸುನಾಮಿ ಅಲೆಗೆ ಸಿಲುಕಿ ಕಣ್ಮರೆಯಾಗಿದೆ.

ಹೋಟೆಲ್ ಗಳು, ಮಾಲ್ ಗಳು, ಬೃಹತ್ ವಾಣಿಜ್ಯ ಸಂಕೀರ್ಣಗಳು ಅಪಾರ ಹಾನಿಗೆ ತುತ್ತಾಗಿವೆ. ರಾಜಧಾನಿ ಟೋಕಿಯೋ ಗಡಗಡ ನಡುಗಿ ಹೋಗಿದ್ದು, ಅಪಾರ ಸಂಖ್ಯೆಯ ಜನ ಬಸ್ಸುಗಳಿಗಾಗಿ ನಿಲ್ದಾಣಗಳಲ್ಲಿ ಕಾಯುತ್ತಿದ್ದಾರೆ.

ಹಲವೆಡೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ದಟ್ಟ ಹೊಗೆ ಆವರಿಸಿದೆ. ಸುರಂಗಮಾರ್ಗಗಳನ್ನು ಮುಚ್ಚಲಾಗಿದೆ. ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಮಾನನಿಲ್ದಾಣಗಳು, ರೈಲು ನಿಲ್ದಾಣಗಳೂ ಸಹ ಮುಚ್ಚಲ್ಪಟ್ಟಿವೆ. ಸಂಪೂರ್ಣ ಇಡೀ ದೇಶವೆ ಸ್ತಬ್ದಗೊಂಡಂತೆ ಭಾಸವಾಗಿದೆ.

ಕಟ್ಟಡಗಳ ಕಿಟಕಿಗಳಿಂದ ಜನತೆ ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ. ಕರಾವಳಿ ತೀರಗಳಲ್ಲಿ 10 ಮೀಟರ್ ಗಿಂತಲೂ ಅಧಿಕ ಎತ್ತರದ ರಕ್ಕಸ ಅಲೆಗಳು ಅಪ್ಪಳಿಸಿ ವಾಹನಗಳನ್ನು, ದೋಣಿಗಳನ್ನು ಅಲ್ಲದೆ ಕಟ್ಟಡಗಳನ್ನೂ ಕೊಚ್ಚಿಕೊಂಡು ಹೋಗಿವೆ. ಎಲ್ಲೆಲ್ಲೂ ಆತಂಕ, ಭಯ ಆವರಿಸಿದೆ.

ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.