ಭಾನುವಾರ, ಮೇ 16, 2021
24 °C

ಭೂಕಂಪದಿಂದ ಟ್ಯಾಗೋರ್ ಮನೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾರ್ಜಿಲಿಂಗ್ (ಪಿಟಿಐ): ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರ ಅನೇಕ ಕಾವ್ಯ ರಚನೆಗೆ ಸ್ಫೂರ್ತಿ ಹಾಗೂ ಸಾಕ್ಷಿಯಾಗಿದ್ದ ಇಲ್ಲಿಯ ಪರ್ವತಶ್ರೇಣಿಯಲ್ಲಿನ ಎರಡು ಮನೆಗಳಿಗೆ ಭೂಕಂಪದಿಂದ ಹಾನಿಯಾಗಿದೆ.ಟ್ಯಾಗೋರ್ ಅವರು 1930ರಲ್ಲಿ ವಾಸಿಸುತ್ತಿದ್ದ ಕಾಲಿಬಂಗ್‌ನ ಗೌರಿಪುರ ನಿವಾಸದ ಹಿಂಭಾಗದಲ್ಲಿದ್ದ ನೆಲಮಹಡಿ ಕುಸಿದು ಬಿದ್ದಿದೆ. ಅಳಿದುಳಿದ ಕಟ್ಟಡದ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ.ತಮ್ಮ ಜೀವಿತದ ಕೊನೆಯ ದಿನಗಳನ್ನು ಕಳೆದ ಮಾಂಗೊಪ ಬೆಟ್ಟ ಪ್ರದೇಶದಲ್ಲಿರುವ `ರವೀಂದ್ರ ಭವನ~ಕ್ಕೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದ್ದು ಟ್ಯಾಗೋರ್ ಅವರ ಮೇಜು,  ಹಾಸಿಗೆ ಸೇರಿದಂತೆ ಅನೇಕ ವಸ್ತುಗಳನ್ನು ಸಂರಕ್ಷಿಸಿ ಇಡಲಾಗಿದೆ.1938- 40ರ ಅವಧಿಯಲ್ಲಿ ಅನೇಕ ಅಮೂಲ್ಯ ಕೃತಿಗಳನ್ನು ಅವರು ಇಲ್ಲಿ ರಚಿಸಿದ್ದರು. ಅವರ ಮಹತ್ವದ`ಜನ್ಮದಿನ~ ಕೃತಿ ಅದರಲ್ಲಿ ಒಂದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.