ಭಾನುವಾರ, ಮೇ 22, 2022
21 °C

ಭೂಕಂಪ: ಭೂ ಪರಿಭ್ರಮಣ ವೇಗ ಹೆಚ್ಚಳ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಜಪಾನ್ ಹಾಗೂ ನೆರೆಹೊರೆಯ ರಾಷ್ಟ್ರಗಳನ್ನು ವಿಕಿರಣ ವಿಪತ್ತಿನ ಭೀತಿಗೆ ಸಿಲುಕಿಸಿರುವ  ಶುಕ್ರವಾರದ ಭೂಕಂಪವು  ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುವ ವೇಗವನ್ನೇ ಬದಲಾಯಿಸಿಬಿಟ್ಟಿದೆ.

ಈ ಭೂಕಂಪದ ನಂತರ ಭೂಮಿಯ ಪರಿಭ್ರಮಣದ ವೇಗ ಹೆಚ್ಚಾಗಿದೆ. ಹೀಗಾಗಿ ದಿನಮಾನದ ಅವಧಿ 1.8 ಮೈಕ್ರೋಸೆಕೆಂಡುಗಳಷ್ಟು ಮೊಟಕುಗೊಂಡಿದೆ ಎಂದು ನಾಸಾ ವಿವರಿಸಿದೆ.

ರಿಕ್ಟರ್ ಮಾಪಕದಲ್ಲಿ 8.9ರಷ್ಟಿದ್ದ ಭೂಕಂಪವು ಭೂಮಿಯ ತೂಕ ಹಂಚಿಕೆಯಾಗಿದ್ದ ರೀತಿಯನ್ನೇ ಬದಲಿಸಿಬಿಟ್ಟಿದೆ. ಇದರಿಂದಾಗಿ ಸೂರ್ಯನನ್ನು ಭೂಮಿ ಸುತ್ತುವ ವೇಗ ಕೊಂಚ ಹೆಚ್ಚಾಗಿದೆ. ಹೀಗಾಗಿ 24 ತಾಸುಗಳ, ಅಂದರೆ 86,400 ಸೆಕೆಂಡುಗಳನ್ನು ಒಳಗೊಂಡ ಒಂದು ದಿನದ ಅವಧಿ ಈಗ 1.8 ಮೈಕ್ರೊ ಸೆಕೆಂಡುಗಳಷ್ಟು (0.000002 ಸೆಕೆಂಡು) ಕಡಿಮೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.