ಶುಕ್ರವಾರ, ಮೇ 29, 2020
27 °C

ಭೂತಾನ್: ರಾಜದಂಪತಿ ಆರತಕ್ಷತೆ : ರಾಹುಲ್ ಗಾಂಧಿ ಏಕೈಕ ಅತಿಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂತಾನ್: ರಾಜದಂಪತಿ ಆರತಕ್ಷತೆ : ರಾಹುಲ್ ಗಾಂಧಿ ಏಕೈಕ ಅತಿಥಿ

ಥಿಂಪು (ಪಿಟಿಐ): ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಜದಂಪತಿ ಶನಿವಾರ ಆಯೋಜಿಸಿದ್ದ ಆರತಕ್ಷತೆ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಭಾಗವಹಿಸಿ ಗಮನ ಸೆಳೆದರು.ಪುಟ್ಟ ರಾಷ್ಟ್ರವಾದ ಭೂತಾನ್ ಹಾಗೂ ನೆಹರೂ-ಗಾಂಧಿ ಕುಟುಂಬದ ನಡುವಿನ ಸಂಬಂಧವನ್ನು ಇದು ತೋರಿಸುತ್ತದೆ ಎಂದು ಬಣ್ಣಿಸಲಾಗಿದೆ.ಆರತಕ್ಷತೆಯಲ್ಲಿ ಭಾಗವಹಿಸಲು  ಶುಕ್ರವಾರ ಥಿಂಪುವಿಗೆ ಆಗಮಿಸಿದ್ದ ರಾಹುಲ್ ರಾಜ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಬೆರೆತರು.ದೊರೆ ಜಿಗ್ಮೆ ಕೇಸರ್ ನಾಗ್‌ಯೇಲ್ ವಾಂಗ್‌ಚುಕ್ ತಮ್ಮ ಬಾಲ್ಯ ಗೆಳತಿ ಜೇತ್ಸುನ್ ಪೆಮಾ ಅವರನ್ನು ಇತ್ತೀಚೆಗೆಷ್ಟೇ ವರಿಸಿದ್ದರು. ಈ ವಿವಾಹದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಆಚರಣೆಯಲ್ಲಿ ಭಾಗವಹಿಸಲು  ರಾಜ ಕುಟುಂಬ ರಾಹುಲ್ ಗಾಂಧಿ ಅವರನ್ನು ಆಮಂತ್ರಿಸಿತ್ತು. ಈ ಸಮಾರಂಭವು ಭೂತಾನ್ ರಾಜ ಕುಟುಂಬ ಮತ್ತು ಸರ್ಕಾರಿ ಕಾರ್ಯಕ್ರಮವಾಗಿತ್ತು.ವಾಂಗ್‌ಚುಕ್ ಅವರ ಆತ್ಮೀಯ ಸ್ನೇಹಿತರಾಗಿರುವ ರಾಹುಲ್ ಗಾಂಧಿ ಅವರು ಒಬ್ಬರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖಾಸಗಿ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ದಂಪತಿ ಭೂತಾನಿನ ರಾಜ ಸೇನೆಯ ಗೌರವ ರಕ್ಷೆ ಸ್ವೀಕರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.