ಭೂತ ಬಂಗಲೆಯಾದ ಸಿಆರ್‌ಸಿ ಕಟ್ಟಡ...!

7

ಭೂತ ಬಂಗಲೆಯಾದ ಸಿಆರ್‌ಸಿ ಕಟ್ಟಡ...!

Published:
Updated:

ಆಲಮೇಲ: ಸಮೀಪದ ದೇವಣಗಾಂವ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಳೆದ 5-6 ವರ್ಷಗಳ ಹಿಂದೆ ಸಮೂಹ ಸಂಪನ್ಮೂಲ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯದೇ ತಿಪ್ಪೆಗುಂಡಿಯಾಗಿ ಮಾರ್ಪಟ್ಟಿರುದಕ್ಕೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.ರಾಜ್ಯ ಸರಕಾರವು ಡಿ.ಪಿ.ಇ.ಪಿ ಯೋಜನೆಯಡಿಯಲ್ಲಿ ಈ ಕಟ್ಟಡದ ಕಾಮಗಾರಿ ಮುಗಿಸಿದೆ.  ಈ ಕೇಂದ್ರವು ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ 16 ಶಾಲೆಗಳಿಗೆ ಕಚೇರಿಯು ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಮತ್ತು ಶಿಕ್ಷಕರಿಗೆ ಉಪಯೋಗವಾಗುವ ತರಬೇತಿಯನ್ನು ನೀಡುವುದು ಮೊದಲಾದ ಶೈಕ್ಷಣಿಕ ಚಟುವಟಿಕೆಗಳ ಇಲ್ಲಿ ನಡೆಯಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಿಪ್ಪೆಗುಂಡಿ ದನದ ಕೊಟ್ಟಿಗೆಯಾಗಿದ್ದು ಮಾತ್ರ ವಿಪರ್ಯಾಸ.ಕಟ್ಟಡ ಮುಗಿದಾಗಿನಿಂದ ಇಲ್ಲಿ ಶೈಕ್ಷಣಿಕ ಚಟುವಟಿಕೆಗಳೇ ನಡೆದಿಲ್ಲ. ಅಂತಹ ಯಾವುದೇ ಚಟುವಟಿಕೆಗಳನ್ನು ನಡೆಸಬೇಕಾದರೆ ಸರಕಾರಿ ಶಾಲೆಯ ಕೋಣೆಯೊಂದನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಏಕೆಂದರೆ ಈ ಕಟ್ಟಡದ ಗುತ್ತಿಗೆದಾರರು ಅಪೂರ್ಣ ಕೆಲಸ ಮಾಡಿದ್ದರಿಂದ ಇಲ್ಲಿ ಉಪಯೋಗವಿಲ್ಲ ಎಂಬುದು ಅಧಿಕಾರಿಗಳ ಮಾತು.

ಹಾಗೂ ಪುಸ್ತಕ ಬಟ್ಟೆಗಳ ಸಗಟು ಮೂಟೆಗಳನ್ನು ಸಹ ಸರಕಾರಿ ಶಾಲೆ ಕೊಠಡಿಯನ್ನೇ ಉಪಯೋಗಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ಅಲ್ಲಿ ತರಗತಿ ನಡೆಯಲು ಕೋಣೆಗಳು ಇಲ್ಲದ್ದರಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎನ್ನುವದು ಪಾಲಕರ ಆರೋಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry