ಭೂಪತಿ ಜೋಡಿಗೆ ಆಘಾತ

7

ಭೂಪತಿ ಜೋಡಿಗೆ ಆಘಾತ

Published:
Updated:

ನವದೆಹಲಿ (ಪಿಟಿಐ): ಭಾರತದ ಮಹೇಶ್‌ ಭೂಪತಿ ಮತ್ತು ಸ್ವೀಡನ್‌ನ ರಾಬೆರ್ಟಾ ಲಿಂಡ್‌ಸ್ಟೆಟ್‌ ಥಾಯ್ಲೆಂಡ್‌ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ 6–2, 3–6, 8–10ರಲ್ಲಿ ಸ್ಪೇನ್‌ನ ಡೇನಿಯಲ್‌ ಗಿಮೆನೊ ಇಟಲಿಯ ಪವೊಲೊ ಲೊರ್ನೆಂಜಿ ಎದುರು ಸೋಲು ಕಂಡರು.ಸೋಮದೇವ್‌ಗೆ ಸೋಲು: ಕ್ವಾಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಸೋಮದೇವ್‌ ದೇವವರ್ಮನ್‌ ಮೊದಲ ಸುತ್ತಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದಾರೆ.ಎಟಿಪಿ ಕ್ರಮಾಂಕದಲ್ಲಿ 98ನೇ ಸ್ಥಾನ ಹೊಂದಿರುವ ಸೋಮದೇವ್‌ 3–6, 3–6ರಲ್ಲಿ ತಮಗಿಂತ ಕಡಿಮೆ ಕ್ರಮಾಂಕದ ಇಟಲಿಯ ಮಾಟ್ಟೊಯೊ ವಿಯೊಲಾ ಎದುರು ಮುಗ್ಗರಿಸಿದರು. ಈ ಪಂದ್ಯ ಒಂದು ಗಂಟೆ 15 ನಿಮಿಷ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry