ಭೂಮಿ-ಎಷ್ಟು ಪರಿಚಿತ?

7

ಭೂಮಿ-ಎಷ್ಟು ಪರಿಚಿತ?

Published:
Updated:
ಭೂಮಿ-ಎಷ್ಟು ಪರಿಚಿತ?

1. ಪೃಥ್ವಿಯ ಒಂದು ದೃಶ್ಯ ಚಿತ್ರ-1ರಲ್ಲಿದೆ. ಇಲ್ಲಿ..

ಅ. ಪರಿಪೂರ್ಣವಾಗಿ ಗೋಚರಿಸುತ್ತಿರುವ ಭೂ ಖಂಡ ಯಾವುದು?

ಬ. ಭಾಗಶಃ ಗೋಚರಿಸುತ್ತಿರುವ ಭೂ ಖಂಡಗಳು ಯಾವುವು?

ಕ. ಕಿಂಚಿತ್ತೂ ಕಾಣುತ್ತಿಲ್ಲದ ಭೂ ಖಂಡಗಳು ಯಾವುವು?2. ಬಾಗಿ ಬಳುಕಿ ಹರಿಯುತ್ತಿರುವ ಭಾರೀ ನದಿಯೊಂದರ ದೃಶ್ಯ ಚಿತ್ರ-2ರಲ್ಲಿದೆ. ನದಿಗಳ ಬಗೆಗಿನ ಈ ಪ್ರಶ್ನೆಗಳನ್ನು ಉತ್ತರಿಸಬಲ್ಲಿರಾ?

ಅ. ಅತ್ಯಂತ ಹೆಚ್ಚು ಜಲಪ್ರವಹಿಸುವ ನದಿ.

ಬ. ಆಫ್ರಿಕದ ಅತ್ಯಂತ ದೀರ್ಘ ನದಿ

ಕ. ವಿಶ್ವದಾಖಲೆಯ ಕೊರಕಲು ‘ದಿ ಗ್ರಾಂಡ್‌ಕೆನ್ಯಾನ್’ ಅನ್ನು ಕೊರೆದಿರುವ ನದಿ

ಡ. ಧರೆಯ ಅತ್ಯಂತ ‘ಪವಿತ್ರ’ ನದಿ.3. ರೆಕ್ಕೆ ವಿಸ್ತಾರದಲ್ಲಿ ಗರಿಷ್ಠ ಅಳತೆಯ ವಿಶ್ವದಾಖಲೆ ಹೊಂದಿರುವ ಪಕ್ಷಿ ಚಿತ್ರ-3ರಲ್ಲಿದೆ. ಈ ಹಕ್ಕಿ ಯಾವುದು?

ಅ. ರಣಹದ್ದು

ಬ. ಆಲ್‌ಬಟ್ರಾಸ್

ಕ. ಗನೆಟ್

ಡ. ಪಫಿನ್4. ವಾನರ ವಿಧವಾದ ‘ಗಿಬ್ಬನ್’ ಚಿತ್ರ-4ರಲ್ಲಿದೆ. ಇವುಗಳ ನೈಸರ್ಗಿಕ ನೆಲೆ ಯಾವ ಭೂಖಂಡಕ್ಕೆ ಸೀಮಿತವಾಗಿದೆ?

ಅ. ದಕ್ಷಿಣ ಅಮೆರಿಕ

ಬ. ಆಫ್ರಿಕ

ಕ. ಯೂರೋಪ್

ಡ. ಏಷಿಯ5. ಕಡಲಂಚಿನ ಕ್ಷಾರ ಜಲದಲ್ಲಿ, ಊರುಗೋಲು ಗಳಂಥ ಬೇರುಗಳ ಮೇಲೆ ನಿಂತು ಬೆಳೆವ ಅತ್ಯಂತ ವಿಶಿಷ್ಟ ವೃಕ್ಷ ವಿಧ ಚಿತ್ರ-5ರಲ್ಲಿದೆ. ಇಂಥ ಮ್ಯಾಂಗ್ರೂವ್ ವೃಕ್ಷ’ಗಳ ವಿಶ್ವಪ್ರಸಿದ್ಧ ಅಡವಿ ಪ್ರದೇಶ ನಮ್ಮ ದೇಶದಲ್ಲಿದೆ. ಅದು ಯಾವುದು?

ಅ. ಮೌನಕಣಿವೆ

ಬ. ಸುಂದರಬನ

ಕ. ನಾಗರಕಟ್ಟೆ

ಡ. ಮಧುಮಲೈ6. ಸುಪ್ರಸಿದ್ಧ ಕೀಟ ‘ಜೇನ್ನೊಣ’ ಚಿತ್ರ-6ರಲ್ಲಿದೆ.

ಅ. ಜೇನ್ನೊಣಗಳಂತೆಯೇ ಸಂಘ ಜೀವನಕ್ಕೆ ಹೆಸರಾದ ಮತ್ತೆರಡು ಕೀಟ ವಿಧಗಳು ಯಾವುವು?

ಬ. ಜೇನ್ನೊಣದಂತೆಯೇ ಪರಾಗಸ್ಪರ್ಶಕ್ಕೆ ನೆರವಾಗುತ್ತಿರುವ ಪ್ರಸಿದ್ಧ ಕೀಟ ಗೊತ್ತೇ?

ಕ. ಜೇನ್ನೊಣದಂತೆಯೇ ಸಮಷಡ್ಭುಜಾಕಾರದ ಕೊಠಡಿಗಳ ಗೂಡು ನಿರ್ಮಿಸುವ ಕೀಟ ಯಾವುದು?7. ಭೂಮಿ ಒಡಲಲ್ಲಿ ರೂಪುಗೊಂಡ ನೈಸರ್ಗಿಕ ನಿಧಿ ಚಿತ್ರ-7ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುವು ನೇರವಾಗಿ ನೆಲದಲ್ಲಿ ದೊರಕುವುದಿಲ್ಲ?

ಅ. ಕಲ್ಲಿದ್ದಲು

ಬ. ಕಬ್ಬಿಣ

ಕ. ಪೆಟ್ರೋಲ್

ಡ. ವಜ್ರ

ಇ. ಗ್ರಾನೈಟ್

ಈ. ಪ್ಲಾಟಿನಂ8. ‘ಮರುಭೂಮಿ’ ದೃಶ್ಯ ಚಿತ್ರ-8ರಲ್ಲಿದೆ. ಅದರ ಕುರಿತ ಈ ಹೇಳಿಕೆಗಳಲ್ಲಿ ಯಾವುವು ಸರಿಯಲ್ಲ?

ಅ. ಮರುಭೂಮಿಗಳಲ್ಲಿ ಮಳೆಯೇ ಬರುವುದಿಲ್ಲ.

ಬ. ಮಾನವ ನಗರಗಳೇ ನೆಲೆಗೊಂಡಿರುವ ಮರುಭೂಮಿಗಳೂ ಇವೆ.

ಕ. ಮರುಭೂಮಿಗಳ ಮೂಲಕ ಯಾವುದೇ ನದಿ ಪ್ರವಹಿಸುವುದಿಲ್ಲ.

ಡ. ಎಲ್ಲ ಮರುಭೂಮಿಗಳಲ್ಲೂ ಮರಳು ತುಂಬಿರುತ್ತದೆ.

ಇ. ‘ಅಟಕಾಮ’ ದಕ್ಷಿಣ ಅಮೆರಿಕದ ಮರುಭೂಮಿ.

ಈ. ‘ಸಹರಾ’ ಅತ್ಯಂತ ವಿಶಾಲ ಮರುಭೂಮಿ.9. ಪ್ರಸಿದ್ಧ ಪ್ರಾಣಿ ‘ಸಿಂಹ’ ಚಿತ್ರ-9ರಲ್ಲಿದೆ. ‘ಬೆಕ್ಕು’ಗಳ ಗುಂಪಿಗೇ ಸೇರಿರುವ ಸಿಂಹಗಳ ಅತ್ಯಂತ ವಿಶಿಷ್ಟ ಗುಣಗಳು ಏನೇನು-ಗುರುತಿಸಬಲ್ಲಿರಾ?

ಅ. ಸಿಂಹ ಅತ್ಯಂತ ದೊಡ್ಡ ಬೆಕ್ಕು.

ಬ. ಸಿಂಹ ಮರಗಳನ್ನೇರಬಲ್ಲದು.

ಕ. ಅವು ಗುಂಪು ಜೀವನ ನಡೆಸುತ್ತವೆ.

ಡ. ಅದು ಬಲಿಷ್ಠ ಬೇಟೆಗಾರ.

ಇ. ಅದು ವೇಗವಾಗಿ ಓಡಬಲ್ಲದು.10. ವಿಶಿಷ್ಟ ರೂಪದ ಮೋಡರಾಶಿಚಿತ್ರ-10ರಲ್ಲಿದೆ. ಇಂಥ ಮೋಡಗಳ ಹೆಸರೇನು ಗೊತ್ತೇ?

ಅ. ಕ್ಯುಮುಲಸ್ ಮೋಡ

ಬ. ಮಾರ್ನಿಂಗ್ ಗ್ಲೋರೀ

ಕ. ಸ್ಟ್ರಾಟಸ್ ಮೋಡ

ಡ. ಮಸೂರ ಮೋಡ11. ಪ್ರತಿ ವರ್ಷ ‘ವಲಸೆ ಪಯಣ’ ಕೈಗೊಳ್ಳುವ ವಿಖ್ಯಾತ ಪ್ರಾಣಿ ‘ಕ್ಯಾಂಬೂ’ ಹಿಂಡೊಂದು ಚಿತ್ರ-11ರಲ್ಲಿದೆ. ಹೀಗೆ ವಾರ್ಷಿಕ ವಲಸೆ ನಡೆಸುವ ಪ್ರಾಣಿಗಳನ್ನು ಈ ಪಟ್ಟಿಯಲ್ಲಿ ಗುರುತಿಸಿ:

ಅ. ‘ಆರ್ಕ್‌ಟಿಕ್ ಟರ್ನ್’ ಹಕ್ಕಿ, ಬ. ಕಪ್ಪು ಗೇಂಡಾಮೃಗ, ಕ. ಕೆಂಪು ಏಡಿ, ಡ. ಮೋನಾರ್ಕ್ ಚಿಟ್ಟೆ, ಇ. ಗೊರಿಲ್ಲ, ಈ. ಲಾಗರ್‌ಹೆಡ್ ಕಡಲಾಮೆ, ಣ. ಕಾಳಿಂಗ ಸರ್ಪ, ಉ. ಕಂದು ತಿಮಿಂಗಿಲ, ಟ. ವೈಲ್ಡ್ ಬೀಸ್ಟ್

 

ಉತ್ತರಗಳು

1. ಅ-ಯೂರೋಪ್

ಬ-ಏಷಿಯ, ಆಫ್ರಿಕ, ಉತ್ತರ ಅಮೆರಿಕ ಕ-ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ದಕ್ಷಿಣ ಅಮೆರಿಕ.

2. ಅ-ಅಮೆಜಾನ್; ಬ-ನೈಲ್; ಕ-ಕೊಲರೆಡೋ; ಡ-ಗಂಗಾ.

3. ಬ-ಆಲ್‌ಬಟ್ರಾಸ್

4. ಡ-ಏಷಿಯಾ

5. ಬ-ಸುಂದರಬನ

6. ಅ-ಇರುವೆ, ಗೆದ್ದಲು; ಬ-ಚಿಟ್ಟೆ; ಕ-ಕದಿರಿಬ್ಬೆ.

7. ಬ,ಕ.

8. ಅ, ಕ ಮತ್ತು ಡ.

9. ಅ ಮತ್ತು ಕ

10. ಡ-ಮಸೂರ ಮೋಡ

11. ಅ, ಕ, ಡ, ಈ, ಉ ಮತ್ತು ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry