ಗುರುವಾರ , ಏಪ್ರಿಲ್ 15, 2021
24 °C

ಭೂಮಿ ಬಿರುಕು: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವದತ್ತಿ: ತಾಲ್ಲೂಕಿನ ಬೆಡಸೂರ ಗ್ರಾಮದಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಗ್ರಾಮದ ಮೌಳೇಶ ಗುಡೇನ್ನವರ ಹಾಗೂ ಮಾರುತಿ ಹೂಗಾರ ಎಂಬುವವರ ಮಸಾರಿ ಹೊಲದಲ್ಲಿ ಕಳೆದ ಒಂದು ವಾರದಿಂದ ಸುಮಾರು 300 ಅಡಿಯಷ್ಟು ಉದ್ದ, 10 ಅಡಿ ಆಳದಷ್ಟು ಬಿರುಕು ಉಂಟಾಗಿದೆ. ಇದಲ್ಲದೇ ಪಕ್ಕದಲ್ಲಿರುವ ಗದಿಗೆಪ್ಪ ಗದಿಗೆಪ್ಪನವರ ಮನೆ ಸಹ ಬಿರುಕು ಬಿಟ್ಟಿದೆ.ಗಾಳಿಸುದ್ದಿಗೆ ಕಿವಿಗೊಡಬೇಡಿ
: ಮಳೆ ಕೊರತೆಯಿಂದ ಭೂಮಿ ಬಾಯಿ ಬಿಡುವುದು ಸಹಜ. ಮಲಪ್ರಭೆಯ ಮಡಿಲು ಈ ಸಲ ಖಾಲಿಯಾಗಿದ್ದರಿಂದ ಈ ಬಿರುಕು ಉಂಟಾಗಿರಬಹುದು. ಅದೇನೆ ಇರಲಿ ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿದ್ದು, ತಜ್ಞರು ಆಗಮಿಸಲಿದ್ದಾರೆ. ಅವರು ಬಂದು ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯ ತಿಳಿಸುವರು. ಜನತೆ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು. ಭೂ ತಜ್ಞರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಪಡೆಯಲಾಗುವುದು. ಗ್ರಾಮಸ್ಥರು ಎಚ್ಚರದಿಂದ ಇರಬೇಕು   ಎಂದು  ಸಬ್‌ಇನ್‌ಸ್ಪೆಕ್ಟರ್ ಪ್ರಶಾಂತ ನಾಯಕ ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.