ಭೂಮಿ ಮಾರಲು ಅಕ್ರಮ ಅವಕಾಶ: ಐಎಎಸ್ ಅಧಿಕಾರಿ ಅಮಾನತು

7

ಭೂಮಿ ಮಾರಲು ಅಕ್ರಮ ಅವಕಾಶ: ಐಎಎಸ್ ಅಧಿಕಾರಿ ಅಮಾನತು

Published:
Updated:

ರಾಯಪುರ, (ಐಎಎನ್‌ಎಸ್): ಬುಡಕಟ್ಟು ಜನಾಂಗಕ್ಕೆ ಸೇರಿದ ಭೂಮಿಯನ್ನು ಇತರರಿಗೆ ಮಾರಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಐಎಎಸ್ ಅಧಿಕಾರಿ ಟಿ.ರಾಧಾಕೃಷ್ಣನ್ ಅವರನ್ನು ಛತ್ತೀಸ್‌ಗಡ ಸರ್ಕಾರ ಅಮಾನತು ಮಾಡಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ರಾಜ್ಯದಲ್ಲಿ ಈ ಶ್ರೇಣಿಯ ಅಧಿಕಾರಿಯನ್ನು ಅಮಾನತು ಮಾಡಿದ ಮೊದಲ ಪ್ರಕರಣ ಇದಾಗಿದೆ. 2008ರ ಜನವರಿಯಿಂದ 2011ರ ಜನವರಿವರೆಗೆ ಕಂದಾಯ ಮಂಡಳಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಧಾಕೃಷ್ಣನ್, ಇದಕ್ಕಾಗಿ ನಿಯಮಗಳನ್ನು ಸಡಿಲ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿ ನಾರಾಯಣ್ ಸಿಂಗ್ ನೇತೃತ್ವದ ತನಿಖಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ, ರಾಧಾಕೃಷ್ಣನ್ ಅವರು ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದೆ. 300ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಕೈಗಾರಿಕೆಗಳು ಬುಡಕಟ್ಟು ಜನರ ಭೂಮಿಯನ್ನು ಅಕ್ರಮವಾಗಿ ಖರೀದಿಸಲು ಅವರು ಅನುವು ಮಾಡಿಕೊಟ್ಟಿದ್ದಾರೆ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry