`ಭೂವೈಕುಂಠ'ದರ್ಶನ

7

`ಭೂವೈಕುಂಠ'ದರ್ಶನ

Published:
Updated:

ಭದ್ರಾವತಿ: ಪುರಾಣ ಪ್ರಸಿದ್ಧ ದೇವಾಲಯ ಲಕ್ಷ್ಮೀನರಸಿಂಹ ಸ್ವಾಮಿ ಹೂವಿನ ಅಲಂಕಾರದಿಂದ ಕಂಗೊಳಿಸಿತು.

ಹೊರಗೆ ಬೃಹತ್ ಗಾತ್ರದಲ್ಲಿ ನಿರ್ಮಿಸಿದ್ದ ರಾಜಗೋಪುರ, ಸ್ವರ್ಣ ವರ್ಣದ ಸಪ್ತ ದ್ವಾರ, ಪ್ರವೇಶ ದ್ವಾರದಲ್ಲಿ ಉತ್ಸವ ಮೂರ್ತಿಯ ತೂಗುಯ್ಯಾಲೆಯ ಸೌಂದರ್ಯ ಸವಿಯಲು ಸಹಸ್ರಾರು ಮಂದಿ. ಬೆಳಗಿನ ಚುಮು ಚುಮು ಚಳಿ ಲೆಕ್ಕಿಸದೆ ನೆರೆದಿದ್ದ ಭಕ್ತ ಸಮೂಹದ ನಡುವೆ ವಿವಿಧ ವೇದ ಮಂತ್ರ ಘೋಷ, ಸೌಂದರ್ಯಲಹರಿ, ವಿಷ್ಣು ಸಹಸ್ರನಾಮ ನಡುವೆ ಸಪ್ತ ಮಹಾದ್ವಾರಕ್ಕೆ ಪೂಜೆ ನೆರವೇರಿಸಿದ ಪುರೋಹಿತರು.- ಇವಿಷ್ಟು ಕಂಡು ಬಂದದ್ದು ಸೋಮವಾರ ಬೆಳಗಿನ ಜಾವ ಹಳೇನಗರ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ, ಸಪ್ತ ದ್ವಾರಗಳು ತೆರೆಯುತ್ತಿದ್ದಂತೆ ನಮೋ ಲಕ್ಷ್ಮೀನಾರಾಯಣ, ಗೋವಿಂದಾ, ಗೋವಿಂದಾ... ಮುಗಿಲು ಮಟ್ಟುವ ಘೋಷಣೆಗಳ ನಡುವೆ ಭಕ್ತ ಸಮೂಹದಿಂದ ಭೂವೈಕುಂಠನಿಗೆ ಪುಷ್ಪಾರ್ಚನೆ ನಡೆಯಿತು.ಸಪ್ತ ದ್ವಾರಗಳ ಕಡೆಯಲ್ಲಿ ಸಮುದ್ರ ಕಲ್ಪನೆಯ ಅಲಂಕಾರದ ನಡುವೆ ಪವಡಿಸಿರುವ ಲಕ್ಷ್ಮೀರಂಗನಾಥನ ವಿಗ್ರಹಕ್ಕೆ ನಮಿಸಿದ ಭಕ್ತ ಸಮೂಹ, ಗೋವಿಂದ, ಗೋವಿಂದ ಘೋಷಣೆ ಜತೆಗೆ ಸಾಗಿದ್ದು ವಿಶೇಷ.ಬೆಳಿಗ್ಗೆ ಮಹಾದ್ವಾರ ತೆಗೆಯುತ್ತಿದ್ದಂತೆ ಸಹಸ್ರಾರು ಮಂದಿ ಭಕ್ತರು ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು. ತಹಶೀಲ್ದಾರ್ ಯೋಗೇಶ್ವರ್, ನಗರಸಭೆ ಆಯುಕ್ತ ಬಿ.ಡಿ. ಬಸವರಾಜ್ ಬೆಳಗಿನ ಪೂಜಾ ಸಂದರ್ಭದಲ್ಲೇ ಹಾಜರಿದ್ದರು.

ಪೊಲೀಸರು ಬಂದೋಬಸ್ತ್ ಕೈಗೊಂಡ್ದ್ದಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry