ಭೂಷಣ್‌ಗೆ ಜಮೀನು: ತನಿಖೆಗೆ ಆಗ್ರಹ

7

ಭೂಷಣ್‌ಗೆ ಜಮೀನು: ತನಿಖೆಗೆ ಆಗ್ರಹ

Published:
Updated:

ಶಿಮ್ಲಾ(ಐಎಎನ್‌ಎಸ್): ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ಮುಖಂಡ ಪ್ರಶಾಂತ್ ಭೂಷಣ್ ಅವರಿಗೆ ರಾಜ್ಯದಲ್ಲಿ ಮಂಜೂರಾಗಿರುವ ಟೀ ತೋಟದ ಬಗ್ಗೆ ತನಿಖೆ ನಡೆಸುವಂತೆ ಮಂಗಳವಾರ ಹಿಮಾಚಲ ಪ್ರದೇಶದ ಕಾಂಗ್ರೆಸ್ ಪಕ್ಷವು ಆಗ್ರಹಿಸಿದೆ.ರಾಜ್ಯ ಬಿಜೆಪಿ ಸರ್ಕಾರವು ಕಾನೂನು ಸಮ್ಮತವಲ್ಲದ ರೀತಿ ಕಾಂಗರ್ ಜಿಲ್ಲೆಯ ಪಾಲಂಪುರ್ ಬಳಿ ಭೂಷಣ್ ಅವರಿಗೆ ಜಮೀನು ಮಂಜೂರು ಮಾಡಿದೆ. 2010ರಲ್ಲಿ ನಡೆದಿರುವ ಈ ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ಸ್ವಾತಂತ್ರ್ಯ ವಿಚಾರಣೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವ ಹಾಗೂ  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹರೀಶ್ ಮಹಾಜನ್ ಒತ್ತಾಯಿಸಿದ್ದಾರೆ.ಪ್ರಿಯಾಂಕಾ ಗಾಂಧಿ ಅವರು ಶಿಮ್ಲಾ ಸುತ್ತಮುತ್ತ ಆಸ್ತಿ ಖರೀದಿಸಿರುವುದನ್ನು ಸಮರ್ಥಿಸಿಕೊಂಡಿರುವ ಅವರು, ಸುಪ್ರೀಂಕೋರ್ಟ್ ವಕೀಲರಾಗಿರುವ ಪ್ರಶಾಂತ್ ಭೂಷಣ್ ರಾಜ್ಯದಲ್ಲಿ ಆಸ್ತಿ ಖರೀದಿಸಿರುವ ಉದ್ದೇಶವನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry