ಭಾನುವಾರ, ಅಕ್ಟೋಬರ್ 20, 2019
21 °C

ಭೂಷಣ್‌ಗೆ ದಂಡ

Published:
Updated:

ಅಲಹಾಬಾದ್ (ಪಿಟಿಐ): ಜಮೀನು ಖರೀದಿಗೆ ಸಂಬಂಧಿಸಿದಂತೆ ಅಣ್ಣಾ ತಂಡದ ಸದಸ್ಯ ಶಾಂತಿ ಭೂಷಣ್ 1.35 ಕೋಟಿ ರೂಪಾಯಿ ಮುದ್ರಾಂಕ ಶುಲ್ಕವನ್ನು ಪಾವತಿಸದೇ ವಂಚಿಸಿದ್ದಾರೆ ಎನ್ನಲಾಗಿದ್ದು, ಇದೀಗ ಅವರಿಗೆ 27 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿದೆ.ಇಲ್ಲಿನ ಪ್ರತಿಷ್ಠಿತ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಖರೀದಿಸಲಾದ 7,818 ಚದರ ಮೀಟರ್ ಅಳತೆಯ ಆಸ್ತಿಗೆ ಸಂಬಂಧಿಸಿದಂತೆ ಶಾಂತಿ ಭೂಷಣ್ ಇದುವರೆಗೆ ಕೇವಲ 46,700 ರೂಪಾಯಿ ಪಾವತಿಸ್ದ್ದಿದಾರೆ ಎಂದು ಸಹಾಯಕ ಮುದ್ರಾಂಕ ಆಯುಕ್ತ ಕೆ.ಪಿ.ಪಾಂಡೆ ತಿಳಿಸಿದ್ದಾರೆ.ಈ ಸಂಬಂಧ ಕಳೆದ ಫೆಬ್ರುವರಿ ತಿಂಗಳಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

 

Post Comments (+)