ಗುರುವಾರ , ಮೇ 19, 2022
20 °C

ಭೂಸುಧಾರಣೆ ಕಾಯ್ದೆ ತಿದ್ದುಪಡಿ: ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣೆ ಅಧಿನಿಯಮ ತಿದ್ದಪಡಿ ಮಾಡಲು ಹೊರಟಿರುವುದು ರೈತ ವಿರೋಧಿಯಾದ ನಿಲುವು. ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಮುಖರಾದ ಜಿ.ಸಿ.ಬೈಯಾರೆಡ್ಡಿ ಆಗ್ರಹಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಭೂಮಿಯನ್ನು ಕೃಷಿಕರ ಕೈಗೆ ಸಿಗದಂತೆ ಮಾಡು ವ ಹುನ್ನಾರವನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡುತ್ತಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ. ಅದು ಅನುಮೋದನೆಗೊಂಡರೆ ಸಣ್ಣ ರೈತರಿಗೆ ಅಪಾರ ತೊಂದರೆಯಾಗಲಿದೆ ಎಂದರು.ಬಡವರಿಗೆ ಕೃಷಿ ಭೂಮಿ ನೀಡಬೇಕು ಎಂಬ ಕಾಯ್ದೆಯ ಜನಪರ ಆಶಯವನ್ನೇ ಸರ್ಕಾರ ಮಗುಚಿಹಾಕಲು ಹೊರ ಟಿದೆ. ಖಾಸಗಿ ಕಂಪನಿಗಳಿಗೆ, ಉದ್ದಿಮೆದಾರರಿಗೆ ನೀಡಲು ಬೇಕಾದ ತಿದ್ದುಪಡಿಯನ್ನು ಮಾಡುವ ಪ್ರಯತ್ನದಲ್ಲಿದೆ. ಪ್ರಯತ್ನ ಪೂರ್ಣಗೊಂಡರೆ ರಾಜ್ಯದಲ್ಲಿ ಬೇಸಾಯದ ಪರಿ ಕಲ್ಪನೆ ಮತ್ತು ವ್ಯಾಖ್ಯಾನವೇ ಬದಲಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.ರೈತರನ್ನು ಆಧರಿಸಿದ ಕೃಷಿಯನ್ನು ಕಂಪನಿ ಆಧಾರಿತ ಕೃಷಿ ಯನ್ನಾಗಿಸುವ ಪ್ರಯತ್ನ ಇದು. ಕೃಷಿ ಆಧಾರಿತ ಕೈಗಾರಿಕೆಗಳನ್ನು, ಸಂಸ್ಕರಣ ಘಟಕಗಳನ್ನು ಕೃಷಿಯ ವ್ಯಾಪ್ತಿಗೆ  ತಂದರೆ ದೊಡ್ಡ ಸಂಖ್ಯೆಯಲ್ಲಿ ರೈತರು ಹಳ್ಳಿಗಳನ್ನು ಬಿಟ್ಟು ಪಟ್ಟಣಕ್ಕೆ ಉದ್ಯೋಗಗಳನ್ನು ಅರಸಿ ವಲಸೆ ಬರಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದರು.ಭೂಮಿತಿ ಕಾಯ್ದೆಗೂ ಸರ್ಕಾರ ತಿದ್ದುಪಡಿ ಮಾಡಲು ಹೊರಟಿದೆ. ಒಂದು ಕುಟುಂಬಕ್ಕೆ ಒಣ ಬೇಸಾಯದ 54 ಎಕರೆ ಜಮೀನಿರಬೇಕು ಎಂಬ ಮಿತಿಯನ್ನು 108 ಎಕೆರೆಗೆ ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ, ಕೃಷಿಕರಲ್ಲದವರು ಕೃಷಿ ಭೂಮಿಯನ್ನು ಕೊಳ್ಳಬೇಕಾದರೆ ಇದ್ದ ವಾರ್ಷಿಕ ಆದಾಯದ ಮಿತಿಯನ್ನು 2 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ. ಸಣ್ಣ ರೈತರಿಗೆ ಮಾತ್ರ ಭೂಮಿ ಮಾರಬಹುದು ಎಂಬ ಅವಕಾಶವೇ ಇಲ್ಲವಾಗಲಿದೆ ಎಂದರು.ರಾಜ್ಯದ ಶೇ 65ರಷ್ಟಿರುವ ಕೃಷಿ ಅವಲಂಬಿತರನ್ನು ಶೇ 25ಕ್ಕೆ ಇಳಿಸುವ ನಿರ್ಧಾರವನ್ನು ಸರ್ಕಾರ ಸಿದ್ಧಪಡಿಸಿರುವ ವಿಶನ್ 2020ರಲ್ಲಿ ಪ್ರಕಟಿಸಲಾಗಿದೆ. 1.04 ಕೋಟಿ ರೈತರಿ ರುವ ರಾಜ್ಯದಲ್ಲಿ 57 ಲಕ್ಷ ಅತಿ ಸಣ್ಣ ರೈತರಿದ್ದಾರೆ. 36 ಲಕ್ಷ ಮಂದಿಗೆ ತುಂಡು ಭೂಮಿಯೂ ಇಲ್ಲ. ಇಂಥ ಸಂದರ್ಭದಲ್ಲಿ ಭೂ ಸುಧಾರಣೆಗಳ ಅಧಿನಿಯಮವನ್ನು ತಿದ್ದಪಡಿ ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಅವರು ಕರೆ ನೀಡಿದರು. ಸಂಘದ ಪ್ರಮುಖರಾದ ಪಿ.ಆರ್.ಸೂರ್ಯನಾರಾಯಣ, ಟಿ.ಎಂ.ವೆಂಕಟೇಶ್ ಮತ್ತು ಕೃಷ್ಣೇಗೌಡ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.