ಭೂಸೇನೆ ಮುಖ್ಯಸ್ಥ ಲಡಾಖ್‌ಗೆ ಭೇಟಿ

7

ಭೂಸೇನೆ ಮುಖ್ಯಸ್ಥ ಲಡಾಖ್‌ಗೆ ಭೇಟಿ

Published:
Updated:

ನವದೆಹಲಿ (ಪಿಟಿಐ): ಚೀನಾದಿಂದ ಪದೇಪದೇ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತಾ ಪರಿಸ್ಥಿತಿಯ ಮಾಹಿತಿ ಪಡೆಯಲು ಭೂಸೇನೆಯ ಮುಖ್ಯಸ್ಥ ವಿಕ್ರಮ್‌ ಸಿಂಗ್‌ ಲಡಾಖ್‌ಗೆ ಶನಿವಾರ ಭೇಟಿ ನೀಡಿದ್ದರು.ಈ ಭೇಟಿಯ ವೇಳೆ ಸಿಂಗ್‌  ಲಡಾಖ್‌ ವಲಯದಲ್ಲಿ ನಿಯೋಜಿಸ­ಲಾಗಿರುವ ಭದ್ರತಾ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು  ಎಂದು ಸೇನೆಯ ಅಧಿಕಾರಿ­ಗಳು ತಿಳಿಸಿದ್ದಾರೆ.ಗಡಿಯಲ್ಲಿ ಮೂಲಸೌಕ­ರ್ಯ­ಗಳನ್ನು ಪರಿಶೀಲಿಸಲು ರಾಷ್ಟ್ರೀಯ ಭದ್ರತಾ  ಸಲಹಾ ಮಂಡಳಿಯ ಅಧ್ಯಕ್ಷ ಶ್ಯಾಮ್‌ ಶರಣ್‌ ನೇತೃತ್ವದ ನಿಯೋಗ ಇತ್ತೀಚೆ­ಗಷ್ಟೇ ಲಡಾಖ್‌ಗೆ ಭೇಟಿ ನೀಡಿತ್ತು. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಪ್ಪಿ­ಸುವ ಕುರಿತು ಪರಿಹಾರ ಸೂತ್ರ ಕಂಡು ಹಿಡಿಯಲು ಎರಡೂ ದೇಶ­ಗಳು ಮಾತುಕತೆ ನಡೆಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry