ಭೂಸ್ಥಿರ ಕಕ್ಷೆಗೆ `ಜಿಸ್ಯಾಟ್-7'

7

ಭೂಸ್ಥಿರ ಕಕ್ಷೆಗೆ `ಜಿಸ್ಯಾಟ್-7'

Published:
Updated:

ಬೆಂಗಳೂರು (ಐಎಎನ್‌ಎಸ್):  ರಾಷ್ಟ್ರದ ಮೊತ್ತಮೊದಲ ಸೇನಾ ಉಪಗ್ರಹ `ಜಿಸ್ಯಾಟ್-7'ನ್ನು ಬುಧವಾರ ಯಶಸ್ವಿಯಾಗಿ ಭೂಸ್ಥಿರ ಕಕ್ಷೆಗೆ ಸೇರಿಸಲಾಗಿದೆ.

185 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ  ಈ ಬಹುಬ್ಯಾಂಡ್ ಸಂವಹನ ಉಪಗ್ರಹ `ಜಿಸ್ಯಾಟ್-7'ನ್ನು ಹಾಸನದಲ್ಲಿರುವ ಉಪಗ್ರಹ ನಿಯಂತ್ರಣ ಕೇಂದ್ರದ ತಜ್ಞರು 36 ಸಾವಿರ ಕಿ.ಮೀ ಎತ್ತರದಲ್ಲಿ ಇರುವ ಭೂಸ್ಥಿರ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದರು ಎಂದು ಇಸ್ರೊ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ) ತಿಳಿಸಿದೆ.ಈ ಉಪಗ್ರಹವು ಅತ್ಯಧಿಕ ಕಂಪನದ  ಹೆಲಿಕ್ಸ್ ಆ್ಯಂಟೆನಾ, ನಾಲ್ಕು ಟ್ರ್ಯಾನ್ಸ್‌ಪಾನ್‌ಡರ್‌ಗಳನ್ನು ಹೊಂದಿದೆ. ಅಲ್ಲದೆ 108 ಆ್ಯಂಪಿಯರ್-ಹವರ್ ಲಿಥಿಯಮ್ ಅಯಾನ್ ಬ್ಯಾಟರಿ ಅಳವಡಿಸಿರುವುದರಿಂದ ಗ್ರಹಣದ ಸಂದರ್ಭದಲ್ಲಿಯೂ  ಕಾರ್ಯ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದೆ.ಈ ಉಪಗ್ರಹವು ನೌಕಾಪಡೆಗೆ ಉತ್ತಮ ಸಂವಹನ ಸೇವೆಯನ್ನು ನೀಡುವುದರಿಂದ ವಿದೇಶಿ ಉಪಗ್ರಹ ಇನ್‌ಮಾರ್‌ಸ್ಯಾಟ್ ಅವಶ್ಯಕತೆ ಇರುವುದಿಲ್ಲ ಎಂದು ರಕ್ಷಣಾ ತಜ್ಞರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry