ಭೂಸ್ವಾಧೀನಕ್ಕೆ ಮಾಲೀಕರ ಒಪ್ಪಿಗೆ ಪಡೆಯುವುದು ಅಗತ್ಯ

7

ಭೂಸ್ವಾಧೀನಕ್ಕೆ ಮಾಲೀಕರ ಒಪ್ಪಿಗೆ ಪಡೆಯುವುದು ಅಗತ್ಯ

Published:
Updated:

ನವದೆಹಲಿ (ಪಿಟಿಐ): ಹಲವು ದಿನಗಳಿಂದ ನೆನೆಗುದಿಯಲ್ಲಿ ಇದ್ದ ವಿವಾದಾತ್ಮಕ ಭೂಸ್ವಾಧೀನ ಮಸೂದೆಗೆ ಸಚಿವರ ಸಮಿತಿ ಒಪ್ಪಿಗೆ ನೀಡಿದ್ದು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ವೇದಿಕೆ ಸಿದ್ಧವಾದಂತಿದೆ.ಸರ್ಕಾರಿ, ಖಾಸಗಿ ಸಹಭಾಗಿತ್ವದ ಅಥವಾ ಖಾಸಗಿ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ಮೂರನೇ ಎರಡರಷ್ಟು ಭಾಗದ ಭೂಮಾಲೀಕರ ಒಪ್ಪಿಗೆ ಅಗತ್ಯವಾಗಿದೆ ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ.ಈ ಮಸೂದೆ ಕಾಯ್ದೆಯಾದಾಗ ಅದನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸುವುದಿಲ್ಲ. ಅದರ ಬದಲಿಗೆ ಕಾಯ್ದೆ ಜಾರಿಗೊಳಿಸಲು ನಿರ್ದಿಷ್ಟ ಕಾಲಮಿತಿ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಗುಂಪಿನಲ್ಲಿ ಹಲವು ಭಿನ್ನಾಭಿಪ್ರಾಯಗಳು ಇದ್ದವು. ಕೆಲ ಸಚಿವರು ಕಾಯ್ದೆ ಪೂರ್ವಾನ್ವಯವಾಗುವಂತೆ ಜಾರಿಯಾಗುವುದನ್ನು ವಿರೋಧಿಸಿದ್ದರು. ಮತ್ತೆ ಕೆಲ ಸಚಿವರು ಭೂಸ್ವಾಧೀನಕ್ಕೆ ಭೂಮಾಲೀಕರು ಹಾಗೂ ಆ ಜಮೀನನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ ಶೇ 80ರಷ್ಟು ಜನರ ಒಪ್ಪಿಗೆ ಬೇಕು ಎಂಬ ಅಂಶವನ್ನು ವಿರೋಧಿಸಿದ್ದರು.ಮಸೂದೆ ಮಂಡಿಸಲು ಇರುವ ಅಡೆತಡೆಗಳೆಲ್ಲ ಈಗ ನಿವಾರಣೆಯಾಗಿವೆ. ಈ ಸಂಬಂಧ ಇರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಿದ್ದೇವೆ. ಕರಡು ಮಸೂದೆ ಅಂತಿಮಗೊಳಿಸಿದ್ದೇವೆ ಎಂದು ಸಚಿವರ ಸಮಿತಿಯ ಮುಖ್ಯಸ್ಥರಾದ ಶರದ್ ಪವಾರ್ ಮಂಗಳವಾರ ಸಭೆಯ ನಂತರ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry