`ಭೂಸ್ವಾಧೀನ ಕಾಯ್ದೆ'ಗೆ ರಾಜ್ಯಸಭೆ ಅಸ್ತು

6

`ಭೂಸ್ವಾಧೀನ ಕಾಯ್ದೆ'ಗೆ ರಾಜ್ಯಸಭೆ ಅಸ್ತು

Published:
Updated:

ನವದೆಹಲಿ: ವಿವಿಧ ಕಾರಣಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯತ ಪರಿಹಾರ ಒದಗಿಸುವ ಉದ್ದೇಶದ ಮಹತ್ವಾಕಾಂಕ್ಷೆಯ `ಭೂಸ್ವಾಧೀನ ಮತ್ತು ಪುನರ್ವಸತಿ ಮಸೂದೆ'ಯನ್ನು ರಾಜ್ಯಸಭೆ ಬುಧವಾರ ರಾತ್ರಿ ಅನುಮೋದಿಸಿತು.ಮಸೂದೆಯ ಪರವಾಗಿ 131 ಮತಗಳು ಹಾಗೂ ವಿರುದ್ಧವಾಗಿ 10 ಮತಗಳು ಬಿದ್ದವು.ಮೇಲ್ಮನೆಯಲ್ಲಿ ಕೆಲ ತಿದ್ದುಪಡಿಗಳೊಂದಿಗೆ ಅಂಗೀಕಾರಗೊಂಡಿರುವ ಮಸೂದೆಯು ಈಗ ಪುನಃ ಲೋಕಸಭೆಯ ಮುಂದೆ ಚರ್ಚೆಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry