ಮಂಗಳವಾರ, ಜೂನ್ 15, 2021
21 °C

ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಮೀನು ಮಾಲೀಕ  ರೈತರೊಂದಿಗೆ ಸಮಾಲೋಚನೆ ನಡಸದೇ, ತಕರಾರು ಅರ್ಜಿ ಪರಿಗಣಿ­ಸದೇ ಲಿಂಗಸುಗೂರು ತಾಲ್ಲೂಕಿನ ಕೋಠಾ ಗ್ರಾಮದ ರೈತರ ಜಮೀನು­ಗಳನ್ನು ಹಟ್ಟಿ ಚಿನ್ನದ ಗಣಿಗಾಗಿ ಭೂ­ಸ್ವಾಧೀನ ಮಾಡಿಕೊಳ್ಳಲು ಮುಂದಾ­ಗಿರುವ ಕ್ರಮ ಖಂಡಿಸಿ ರೈತರು ಸೋಮ­ವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.2012ರ ಆಗಸ್ಟ್ ತಿಂಗಳಲ್ಲಿ ಲಿಂಗಸುಗೂರು ಉಪವಿಭಾಗಾಧಿಕಾರಿ ಭೂಸ್ವಾಧೀನ ಬಗ್ಗೆ ಸಾರ್ವತ್ರಿಕ ತಿಳಿ­ವಳಿಕೆ ನೋಟಿಸ್‌ಅನ್ನು ಎಲ್ಲ ಭೂ ಮಾಲೀಕರಿಗೆ ನೀಡಿದ್ದರು. ತಕರಾರು­ಗಳೇನಾದರೂ ಇದ್ದಲ್ಲಿ 2012 ಸೆಪ್ಟೆಂಬರ್ 22ರೊಳಗೆ ಸಲ್ಲಿಕೆ ಮಾಡಲು ತಿಳಿಸಲಾಗಿತ್ತು. ಆದರೆ, ತಕರಾರು ಅರ್ಜಿ ಸಲ್ಲಿಸಿದ ರೈತ­ರೊಂದಿಗೆ ಲಿಂಗಸುಗೂರು ಉಪವಿಭಾ­ಗಾಧಿಕಾರಿ ಸಮಾಲೋಚನೆ ನಡೆಸಿಲ್ಲ ಎಂದು ಆರೋಪಿಸಿದರು.2013 ಅಕ್ಟೋಬರ್ 15ರಂದು ಉಪವಿಭಾ­ಗಾಧಿಕಾರಿ ಸಭೆ ಕರೆದಿದ್ದರು. ಆದರೆ ಅವರೇ ಸಭೆಗೆ ಬರಲಿಲ್ಲ.

ಬಳಿಕ  2014 ಜನವರಿ 27ರಂದು ಐತೀರ್ಪು ಸೂಚನೆಗೆ ಅನುಮೋದನೆಗೆ ಕಳುಹಿಸಿಕೊಟ್ಟಿದ್ದಾರೆ. ಉಪವಿಭಾಗಾ­ಧಿಕಾರಿ  ರೈತರ ಸಮಸ್ಯೆ ಆಲಿಸದೇ ತರಾ­ತುರಿ­ಯಲ್ಲಿ ಈ ಕಾರ್ಯ ಮಾಡಿದ್ದಾರೆ.ಐತಿರ್ಪೀನಲ್ಲಿ ಪ್ರತಿ ಎಕರೆಗೆ ₨ 56,500 ಎಂದು ಬೆಲೆ ನಿಗದಿಪಡಿಸಲಾಗಿದೆ. ಇದಕ್ಕೆ ರೈತರ ಒಪ್ಪಿಗೆ ಇಲ್ಲ. ಗ್ರಾಮದ ಮನೆ ನಿವೇಶನ ಬೆಲೆಯೇ ಲಕ್ಷಕ್ಕಿಂತ ಹೆಚ್ಚಾಗಿದೆ. ರೈತರ ಭೂಮಿಗೆ ಕನಿಷ್ಠ ಬೆಲೆ ನಿಗದಿ ಮಾಡಿರುವುದು ರೈತರಿಗೆ ಅನ್ಯಾಯ ಮಾಡುವ ಕ್ರಮವಾಗಿದೆ. ಸರ್ಕಾರದ ಮತ್ತು ಭೂ ಸ್ವಾಧೀನ ಅಧಿನಿಯಮ ಪಾಲನೆ ಮಾಡಿಲ್ಲ. ಭೂ ಸ್ವಾಧೀನ ಕಾಯ್ದೆಗಳನ್ನು ಗಾಳಿಗೆ ತೂರಿದ್ದಾರೆ.  ರೈತ ಕುಟುಂಬಗಳಿಗೆ ಮೋಸ ಮಾಡುವ ಕೆಲಸವನ್ನು ಲಿಂಗಸುಗೂರು ಉಪವಿಭಾಗಾಧಿಕಾರಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿ­ರತರು ಆರೋಪಿಸಿದರು.ಜಿಲ್ಲಾಧಿಕಾರಿ ಈ ಎಲ್ಲ ಸಂಗತಿ ಗಮನಿಸ­ಬೇಕು. ಉಪವಿಭಾಗಾಧಿಕಾರಿ ಐತೀರ್ಪಿನಲ್ಲಿ ಪ್ರಸ್ತಾಪಿಸಿರುವ ಅಂಶ  ಪರಿಗಣಿಸಬಾರದು. ಒಂದು ವೇಳೆ ಭೂಮಿಯನ್ನು ಹಟ್ಟಿ ಚಿನ್ನದ ಗಣಿ ಆಡಳಿತ ವರ್ಗ ತೆಗೆದುಕೊಳ್ಳಲು ಮುಂದಾದರೆ ವಿಷ ಸೇವಿಸಬೇಕಾ­ಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.ಬೇಡಿಕೆಗಳು: 2014ರ ಹೊಸ ಭೂಕಾಯ್ದೆ ಜಾರಿ ಮಾಡಬೇಕು, ಹೊಸ ಭೂ ಕಾಯ್ದೆ ಜಾರಿ ಮಾಡದೇ ಇದ್ದಲ್ಲಿ ಭೂಮಿಯನ್ನು ಕೊಡುವುದಿಲ್ಲ. ಭೂಸ್ವಾಧೀನ ನೋಟಿಸ್ ಕೊಡುವ ಮುಂಚೆ ಆದ ಪಹಣಿಗಳ ಹೆಸರಿನ ಮೇಲೆ ಚೆಕ್ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮೆದಾರ್, ಗೌರವಾಧ್ಯಕ್ಷ ಗುಂಡಪ್ಪ ಸಾಹುಕಾರ, ಪ್ರಧಾನ ಕಾರ್ಯದರ್ಶಿ ರಂಗನಾಥ ಹಟ್ಟಿ, ಎನ್ ಸ್ವಾಮಿ, ಖಜಾಂಚಿ ಹಳ್ಳುರಪ್ಪ, ಉಪಾಧ್ಯಕ್ಷ ಮಹಬೂಬಸಾಬ, ಕಾರ್ಯದರ್ಶಿ ಕನಕಪ್ಪ ಗುರಿಕಾರ, ಶಿವಾನಂದ ಹಟ್ಟಿ, ಪವಾಡೆಪ್ಪ, ಶರಣಪ್ಪ, ಬಸವರಾಜ ಮೇದಿನಾಪುರ, ಸಾಬಣ್ಣ, ಶಿವಗ್ಯಾನಪ್ಪ ಹುಣಸಗಿ ಮೊದಲಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.