ಬುಧವಾರ, ಏಪ್ರಿಲ್ 14, 2021
24 °C

ಭೂಹಗರಣ: 2ದಿನ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಅವರು ದಾಖಲು ಮಾಡಿರುವ ದೂರಿನ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಇನ್ನು  ಮುಂದೆ ವಾರಕ್ಕೆ ಎರಡು ದಿನ ನಡೆಸಲಿದೆ. ಪ್ರತಿ ಬುಧವಾರ ಹಾಗೂ ಗುರುವಾರ ಈ ಪ್ರಕರಣದ ವಿಚಾರಣೆಯನ್ನು ನಡೆಸುವುದಾಗಿ ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ ಬುಧವಾರ ಆದೇಶಿಸಿದರು. ವಿಚಾರಣೆಯನ್ನು ದಿನಂಪ್ರತಿ ನಡೆಸುವಂತೆ ಕೋರಿ ಬಾಷಾ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಅವರು ಈ ಆದೇಶ ನೀಡಿದರು.ಭೂಹಗರಣದಂತಹ ಪ್ರಕರಣಗಳ ವಿಚಾರಣೆಯನ್ನು ದಿನನಿತ್ಯ ನಡೆಸಿ ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿತ್ತಿದೆ. ಈ ತೀರ್ಪನ್ನು ಪ್ರಸ್ತುತ ಪ್ರಕರಣದಲ್ಲಿಯೂ ಅಳವಡಿಸಬೇಕು ಎನ್ನುವುದು ಬಾಷಾ ಅವರ ಮನವಿಯಾಗಿತ್ತು. ಭೂಹಗರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರ ವಿರುದ್ಧ ದಾಖಲು ಮಾಡಲಾದ ರಾಚೇನಹಳ್ಳಿ ಹಾಗೂ ವೈಯಾಲಿಕಾವಲ್ ಭೂಗಹರಣಕ್ಕೆ ಸಂಬಂಧಿಸಿದ ದಾಖಲೆಗಳ ಮೂಲ ಪ್ರತಿಯನ್ನು ಬಾಷಾ ಪರ ವಕೀಲರು ಕೋರ್ಟ್‌ಗೆ  ಇದೇ ವೇಳೆ ನೀಡಿದರು.ಈ ಮಧ್ಯೆ, ಮುಖ್ಯಮಂತ್ರಿ ವಿರುದ್ಧ ದೂರು ದಾಖಲು ಮಾಡಲು ರಾಜ್ಯಪಾಲರಿಂದ ಅನುಮತಿ ಪಡೆದುಕೊಂಡಿರುವ ಇನ್ನೊಬ್ಬ ವಕೀಲ ಕೆ ಎನ್ ಬಾಲರಾಜ್ ಅವರ ಸಾಕ್ಷಿ ಹೇಳಿಕೆಯನ್ನು ಕೋರ್ಟ್ ಪಡೆದುಕೊಂಡಿತು. ಯಡಿಯೂರಪ್ಪ ಅವರು ಯಾವ ರೀತಿ ಭೂಹಗರಣ ನಡೆಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು. ವಿಚಾರಣೆಯನ್ನು ಗುರುವಾರಕ್ಕೆ (ಮಾರ್ಚ್ 17) ಮುಂದೂಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.