ಭೂ ಚೇತನ ವಿಸ್ತರಣೆ: ಸಿಎಂ

7

ಭೂ ಚೇತನ ವಿಸ್ತರಣೆ: ಸಿಎಂ

Published:
Updated:

ಬೆಂಗಳೂರು: ಪ್ರಸ್ತುತ ರಾಜ್ಯದ 16 ಜಿಲ್ಲೆಗಳಲ್ಲಿ ಅನುಷ್ಠಾನದಲ್ಲಿರುವ `ಭೂ ಚೇತನ~ ಯೋಜನೆಯನ್ನು ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಕಟಿಸಿದರು.

ಕೃಷಿ ಇಲಾಖೆ ಮತ್ತು ಇಕ್ರಿಸ್ಯಾಟ್ ಸಂಸ್ಥೆ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ಮಣ್ಣಿನ ಫಲವತ್ತತೆ ಕುರಿತು ಮಾಹಿತಿ ಇರುವ ಭೂಪಟ ಬಿಡುಗಡೆ ಮಾಡಿ ಹೇಳಿದರು.`ಭೂ ಚೇತನ~ ಅನುಷ್ಠಾನದ ರೈತರ ಇಳುವರಿಯಲ್ಲಿ ಹೆಚ್ಚಳವಾಗಿದೆ ಎಂದು ಕೃಷಿ ಸಚಿವ ಉಮೇಶ ಕತ್ತಿ ಹೇಳಿದರು.ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಕೆ.ವಿ. ರಾಜು, ಕೃಷಿ ಇಲಾಖೆ ಕಾರ್ಯದರ್ಶಿ ಬಾಬುರಾವ್ ಮುಡಬಿ, ಇಕ್ರಿಸ್ಯಾಟ್‌ನ ವಿಜ್ಞಾನಿ ಡಾ. ಸುಹಾಸ್ ಪಿ. ವಾಣಿ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry