ಭೂ ನಕ್ಷೆ ವೃತ್ತಿಪರ ಕೋರ್ಸ್ ಅರಂಭಕ್ಕೆ ನಿರ್ಧಾರ
ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಲಿಯು ಭೂ ನಕ್ಷೆ ತಂತ್ರಜ್ಞಾನದಲ್ಲಿ ವೃತ್ತಿಪರ ಕೊರ್ಸ್ನ್ನು ಆರಂಭಿಸಲು ನಿರ್ಧರಿಸಿದೆ.
ಔದ್ಯಮಿಕ ಮತ್ತು ಶಿಕ್ಷಣ ಕ್ಷೇತ್ರದ ತಜ್ಞರ ಸಲಹೆಗಳನ್ನು ಪಡೆದು ಈ ವೃತ್ತಿಪರ ಕೋರ್ಸ್ನ್ನು ಆರಂಭಿಸಲಾಗುತ್ತಿದೆ. ಭೂ ನಕ್ಷೆ ರಚನೆ ಮತ್ತು ದತ್ತಾಂಶಗಳ ಸಂಗ್ರಹ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಈ ಕೋರ್ಸ್ನ ಉದ್ದೇಶವಾಗಿದೆ.
2013-14ನೇ ಶೈಕ್ಷಣಿಕ ವರ್ಷದಲ್ಲಿ ಕೋರ್ಸ್ನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಲಿಯ ವ್ಯಾಪ್ತಿಯಲ್ಲಿಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಆರಂಭಿಸಲಾಗುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.