ಭೂ ಫಲವತ್ತತೆ ಹಾಳು ಮಾಡುವ ವಸ್ತು ಮಾರಾಟ

7

ಭೂ ಫಲವತ್ತತೆ ಹಾಳು ಮಾಡುವ ವಸ್ತು ಮಾರಾಟ

Published:
Updated:

ಸಕಲೇಶಪುರ: ಕೃಷಿಯಲ್ಲಿ ಅನುಭವವೇ ಇಲ್ಲದೆ ನಾಲ್ಕು ಗೋಡೆಗಳ ಮಧ್ಯ ಕುಳಿತು ವಿವಿಗಳು ಹೊರ ತರುವ ಪುಸ್ತಕಗಳ ಮಾಹಿತಿ ಸತ್ಯ ಎಂದು ಭ್ರಮಿಸಿರುವ ಕೆಲ ಕಂಪೆನಿಗಳು ಭೂ ಫಲವತ್ತತೆ ಹಾಳು ಮಾಡುವ ವಸ್ತುಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಕೃಷಿ ಸಂಶೋಧಕ ಎಂ.ಕೆ.ಕೈಲಾಸಮೂರ್ತಿ ಆತಂಕ ವ್ಯಕ್ತಪಡಿಸಿದರು.ಇಲ್ಲಿಯ ಎಚ್‌ಡಿಪಿಎ ಸಭಾಂಗಣ ದಲ್ಲಿ ಹಾಸನ ಆಕಾಶವಾಣಿ ಹಬ್ಬ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಬಾನುಲಿ ಬೇಸಾಯ ಕೃಷಿ ವಿಚಾರ ಸಂಕಿರಣದಲ್ಲಿ ಸೂರ್ಯನ ಬೆಳಕು ಮತ್ತು ಮಳೆ ಆಶ್ರಿತ ಬೇಸಾಯ ಕುರಿತು ಮಾತನಾಡಿದರು.ಸೂರ್ಯನ ಬೆಳಕನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿಕೊಂಡು ಆಹಾರ ಉತ್ಪಾದಿಸಿಕೊಳ್ಳುವ ಕಳೆ ಗಿಡಗಳು ಭೂಮಿ ಫಲವತ್ತತೆ ಕಾಪಾಡುತ್ತವೆ. ಈ ಅಂಶವನ್ನು ಗಮನಿಸದ ನಾವುಗಳು ಕಳೆ ನಾಶ ಮಾಡುತ್ತಿದ್ದೆೀವೆ. ಮಣ್ಣಲ್ಲಿ ಆಶ್ರಯ ಪಡೆದ ಹಲವಾರು ಉಪಯುಕ್ತ ಜೀವಿಗಳಿಗೆ ರಕ್ಷಣೆ ನೀಡುವ ಕಳೆಯನ್ನು ಉಳಿಸಿಕೊಳ್ಳಬೇಕು. ಗಿಡ ಗಳನ್ನು ಹಾಳು ಮಾಡುವ ಕೀಟಗಳ ಹತೋಟಿ ಕಾರ್ಯ ಸಕಾಲಕ್ಕೆ ಇತರ ಉಪಯುಕ್ತ ಕೀಟಗಳೇ ಮಾಡುತ್ತವೆ. ಆದ್ದರಿಂದ ರೈತರು ಮಿತ ನೀರು, ಸೂರ್ಯನ ಬೆಳಕು ಹಾಗೂ ಸಾವಯವ ಗೊಬ್ಬರ ಬಳಸಿ ಬೇಸಾಯ ಮಾಡ ಬೇಕು. ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಅಂಶಗಳ ತಿರುಚುವಿಕೆಯಿಂದ ರೈತರು ಗೊಂದಲಗೊಂಡು ತಮ್ಮ ಭೂಮಿಯ ಫಲವತ್ತತೆ ಹಾಳು ಮಾಡಿ ಕೊಳ್ಳುತ್ತಿದ್ದಾರೆ ಎಂದರು.

 

ಬೆಳೆ ರಕ್ಷಕ ಕೀಟಗಳ ಉತ್ಪಾದಕ ಬಿ.ಸಿ. ಅರವಿಂದ್ `ಕೃಷಿಯಲ್ಲಿ ಉಪಯುಕ್ತ ಸೂಕ್ಷ್ಮ ಜೀವಿಗಳು~ ವಿಷಯದ ಬಗ್ಗೆ ಮಾತನಾಡಿ, ರೈತರ ಶ್ರಮ, ಬಂಡಾವಳವೇ ಇಲ್ಲದೆ ವೃದ್ಧಿ ಯಾಗುವ ಅಜೋಲಾ ಶಿಲೀಂದ್ರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಸಾ ಯನಿಕ ಗೊಬ್ಬರ ಹಾಗೂ ವಿಶ ಬಳಕೆ ತೀರಾ ಕಡಿಮೆ ಮಾಡಬೇಕು.ಎರೆಹುಳು ಹೊಂದಿರುವ ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುವ ಅಗತ್ಯವಿಲ್ಲ. ಟ್ರೈ ಕೋಡರ್ಮಾ, ಅಜೋಲಾ ಮೊದಲಾದ ಶಿಲೀಂದ್ರಗಳು ಬೆಳೆಗೆ ಅತ್ಯಂತ ಉಪಯುಕ್ತವಾಗಿವೆ. ಬೇರು ರೋಗ, ಮೆಣಸಿಗೆ ತಗುಲುವ ಸೊರಗು ರೋಗ ಮೊದಲಾದವನ್ನು ನಿಯಂತ್ರಿಸು ತ್ತವೆ. ಈ ಶಿಲೀಂದ್ರಗಳ ಬಳಕೆಗೆ ಮುನ್ನ ರೈತರು ಅವುಗಳ ಆಯಸ್ಸು ಗಮನಿಸ ಬೇಕು. ಗರಿಷ್ಠ 6 ತಿಂಗಳು ಬದುಕಿರುವ ಈ ಶಿಲೀಂದ್ರಗಳು, ನಂತರ ತಮ್ಮ ಸತ್ವ ಕಳೆದುಕೊಳ್ಳುತ್ತವೆ ಎಂದರು.ಗೋ ಉತ್ಪನ್ನಗಳ ಬಳಕೆ ಬಗ್ಗೆ ಮಹೇಶ್ ಮೂರ್ತಿ, ಮಳೆ ನೀರು ಸಂರಕ್ಷಣೆ ಬಗ್ಗೆ ಮಲ್ಲಿಕಾರ್ಜುನ ಹೊಸಪಾಳ್ಯ ಮಾತನಾಡಿದರು. ಹಾಸನ ಆಕಾಶವಾಣಿ ಸಹಾಯಕ ನಿರ್ದೇಶಕಿ ಬಿ.ವಿ.ಪದ್ಮ, ತಾಂತ್ರಿಕ ವಿಭಾಗದ ಉಪ ನಿರ್ದೇಶಕ ಸುಧಾಕರ್, ಆಕಾಶವಾಣಿ ಕೃಷಿರಂಗ ವಿಭಾಗದ ಕಾರ್ಯಕ್ರಮ ಸಂಯೋಜಕ ಡಾ.ವಿಜಯ್ ಅಂಗಡಿ, ಕೆಜಿ ಎಫ್ ಅಧ್ಯಕ್ಷ ಡಾ.ಎನ್.ಕೆ. ಪ್ರದೀಪ್, ಖಜಾಂಚಿ ಯು.ಎಂ. ತೀರ್ಥಮಲ್ಲೇಶ್, ಎಚ್‌ಡಿಪಿಎ ಅಧ್ಯಕ್ಷ ಮುಜಾಹಿದ್ ಅಲಂ, ಕಾರ್ಯದರ್ಶಿ ಮಹೇಶ್ ಇದ್ದರು. ಪ್ರಭಾಮಣಿ ಮಂಜುನಾಥ್ ಮತ್ತು ಹೇಮಾ ಪರಿಸರ ಗೀತೆಗಳನ್ನು ಹಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry