ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ;ರೈತ ಸಂಘಟನೆಗಳಿಂದ ಪ್ರತಿಭಟನೆ

ಶುಕ್ರವಾರ, ಜೂಲೈ 19, 2019
28 °C

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ;ರೈತ ಸಂಘಟನೆಗಳಿಂದ ಪ್ರತಿಭಟನೆ

Published:
Updated:

ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ಸರ್ಕಾರ ತಿದ್ದುಪಡಿ ಮಾಡಲು ಹೊರಟಿರುವುದನ್ನು ಆರೋಪಿಸಿ ರಾಜ್ಯ ಪ್ರಾಂತ ರೈತ ಸಂಘ ಮತ್ತು ರಾಜ್ಯ ಪ್ರಾಂತ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಈಚೆಗೆ ಪ್ರತಿಭಟನೆ ನಡೆಸಿದರು.`ಸರ್ಕಾರ ತರುತ್ತಿರುವ ಹೊಸ ತಿದ್ದುಪಡಿಗಳು ರೈತ ವಿರೋಧಿಯಾಗಿದೆ. ಇದು ಕೃಷಿಯ ವ್ಯಾಖ್ಯಾನವನ್ನೇ ಬದಲು ಮಾಡುವಂತಿದೆ. ಕೃಷಿ ವ್ಯಾಪ್ತಿಯಲ್ಲಿ ರೈತರು, ಕೂಲಿ ಕಾರ್ಮಿಕರು ಮಾತ್ರ ಬರುತ್ತಿದ್ದರು. ಆದರೆ, ಈಗ ಕೃಷಿ ಆಧಾರಿತ ಕಂಪೆನಿಗಳನ್ನು ಸಹ ಕೃಷಿಯ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಕೃಷಿ ಭೂಮಿಯನ್ನು ಕಂಪೆನಿಗಳಿಗೆ ನೀಡುವ ಯೋಜನೆ ಹಮ್ಮಿಕೊಂಡಿದ್ದು, ಕ್ರಮೇಣವಾಗಿ ಭೂಮಿ ರೈತರ ಕೈತಪ್ಪಿ ಹೋಗುತ್ತದೆ ಎಂಬ ಆತಂಕ ಎದುರಾಗಿದೆ~ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಯ್ಯಾರೆಡ್ಡಿ ತಿಳಿಸಿದರು.`ಒಂದು ಕುಟುಂಬ ಗರಿಷ್ಠ 54 ಎಕರೆ ಭೂಮಿಯನ್ನು ಮಾತ್ರ ಹೊಂದಿರಬೇಕು. 54 ಎಕರೆಗಿಂತ ಅಧಿಕ ಭೂಮಿ ಹೊಂದಿದ್ದರೆ, ಹೆಚ್ಚುವರಿ ಭೂಮಿಯನ್ನು ಬಡ ರೈತನಿಗೆ ನೀಡಬೇಕು ಎಂದು ಭೂ ಸುಧಾರಣಾ ಕಾಯ್ದೆ ಹೇಳುತ್ತದೆ. ಆದರೆ, ಈಗ ಸರ್ಕಾರ ತರುತ್ತಿರುವ ಹೊಸ ತಿದ್ದುಪಡಿಯಲ್ಲಿ ಒಂದು ಕುಟುಂಬ 108 ಎಕರೆ ಭೂಮಿ ಹೊಂದಬಹುದು ಎಂದು ತಿಳಿಸಿದೆ~ ಎಂದರು.`ಈ ತಿದ್ದುಪಡಿಗಳು ಜಾರಿಯಾದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ವಿಧಾನಸಭೆಯಲ್ಲಿ ಈ ಪ್ರಸ್ತಾವಗಳನ್ನು ಅಂಗೀಕಾರ ಮಾಡಬಾರದು~ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಾಚಲಯ್ಯ, ರೈತ ಮುಖಂಡರಾದ ನರಸಿಂಹಮೂರ್ತಿ, ಸಿದ್ದಲಿಂಗ ಸ್ವಾಮಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry