ಮಂಗಳವಾರ, ಮೇ 18, 2021
30 °C

ಭೂ ಸ್ವಾಧೀನ ಪರಿಹಾರಕ್ಕೆ ಮಾರ್ಗೋಪಾಯ ಹುಡುಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭೂ ಸ್ವಾಧೀನ ಪರಿಹಾರ ವಿವಾದ ಬಗೆಹರಿಯದ ಹೊರತು ಬಿಎಂಐಸಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ನೈಸ್ ಸಂಸ್ಥೆಗೆ ಸ್ಪಷ್ಟಪಡಿಸಿದೆ.ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದ ನೈಸ್, ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಿತ್ತು.ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೀಗೆ ಹೇಳಿದೆ. `ಭೂ ಸ್ವಾಧೀನ ಪರಿಹಾರದ ಬಗ್ಗೆ ಇತ್ಯರ್ಥವಾಗದೆ ಯಾವ ಅನುಮತಿಯನ್ನೂ ನೀಡುವುದಿಲ್ಲ. ಪರಿಹಾರ ನೀಡದೆ ಭೂಮಿಯನ್ನು ಕಂಪೆನಿಯ ಸ್ವಾಧೀನಕ್ಕೆ ಕೊಡಲಾಗದು.ನೀವು ಇದಕ್ಕೆ ಮಾರ್ಗೋಪಾಯ ಹುಡುಕದಿದ್ದರೆ ಸರ್ಕಾರಕ್ಕೆ ನಾವು ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ~ ಎಂದು ನ್ಯಾಯಪೀಠ ಹೇಳಿತು. ಕೆ.ಎಸ್.ರಾಧಾಕೃಷ್ಣನ್ ಮತ್ತು ಎಚ್.ಎಲ್. ಗೋಖಲೆ ಈ ಪೀಠದ ಇನ್ನಿಬ್ಬರು ನ್ಯಾಯಮೂರ್ತಿಗಳು. ನೈಸ್ ಪರವಾಗಿ ವಕೀಲ ದುಷ್ಯಂತ್ ದವೆ ವಾದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.